ಇಟಲಿಯ ಲೇಕ್ ಕೊಮೋದಲ್ಲಿ ಇಶಾ ಅಂಬಾನಿ, ಆನಂದ್ ಪಿರಾಮಲ್ ನಿಶ್ಚಿತಾರ್ಥ

ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ನಿಶ್ಚಿತಾರ್ಥ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.
ರಿಂಗ್​ ಬದಲಿಸಿಕೊಂಡ ಇಶಾ ಅಂಬಾನಿ, ಆನಂದ್ ಪಿರಾಮಲ್
ರಿಂಗ್​ ಬದಲಿಸಿಕೊಂಡ ಇಶಾ ಅಂಬಾನಿ, ಆನಂದ್ ಪಿರಾಮಲ್
Updated on
ನವದೆಹಲಿ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ನಿಶ್ಚಿತಾರ್ಥ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಭಾರತದ ಶ್ರೀಮಂತ ಉದ್ಯಮಿ ಎಂದೇ ಖ್ಯಾತರಾಗಿರುವ ಮುಖೇಶ್​ ಅಂಬಾನಿ ಪುತ್ರಿ ಇಶಾ ಅಂಬಾನಿ ತಮ್ಮ ಸ್ನೇಹಿತ ಆನಂದ್​ ಪಿರಾಮಲ್​​ ಜತೆ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಶಾ ಅಂಬಾನಿ ಹಾಗೂ ಆಕೆಯ ಭಾವಿ ಪತಿ ಆನಂದ್​ ಪಿರಾಮಲ್​ ನಿಶ್ಚಿತಾರ್ಥ ಉಂಗುರವನ್ನು ಬದಲಿಸಿಕೊಂಡಿದ್ದಾರೆ.
ಆನಂದ್​ ಪಿರಾಮಲ್​ ಅವರು ಪಿರಾಮಲ್​ ಗ್ರೂಪ್​ ಆಫ್​ ಕಂಪನಿ ಅಧ್ಯಕ್ಷ ಅಜಯ್​ ಪಿರಾಮಲ್ ಅವರ ಪುತ್ರರಾಗಿದ್ದಾರೆ.
ಇನ್ನು ಅಂಬಾನಿ ಪುತ್ರಿಯ ನಿಶ್ಚಿತಾರ್ಥಕ್ಕೆ ಬಾಲಿವುಡ್ ನ ಹಲವು ಸ್ಟಾರ್​ಗಳು ಭೇಟಿ ನೀಡಿದ್ದು, ಅವರಲ್ಲಿ ಕೆಲವರು ತಾವು ಇಟಲಿಯಲ್ಲಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. ನಟಿ ಜೂಹಿ ಚಾವ್ಲಾ ಒಂದು ಫೋಟೋ ಹಾಕಿದ್ದು, ಇಟಲಿಯಲ್ಲಿ ನಡೆದ ವಿಶೇಷ ಸಂದರ್ಭವೊಂದರ ವಿನೋದದ ಸಂದರ್ಭ ಎಂದು ಅದಕ್ಕೆ ಕ್ಯಾಪ್ಷನ್​ ಹಾಕಿದ್ದಾರೆ. ಹಾಗೇ ಅನಿಲ್​ ಕಪೂರ್​ ಕೂಡ ಲಿಯೋ ಟಾಲ್ಸ್​ಟಾಯ್​ ಅವರ ಸಂದೇಶವುಳ್ಳ ದೋಣಿಯಲ್ಲಿ ಕುಳಿತಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com