ಬಾಲಕಿಯರ ಜನನಾಂಗ ಊನಗೊಳಿಸುವ ಪದ್ಧತಿ ವಿರುದ್ಧ ಪಿಐಎಲ್: ಸಂವಿಧಾನಕ್ಕೆ ಪೀಠಕ್ಕೆ ಅರ್ಜಿ ಶಿಫಾರಸ್ಸುಗೊಳಿಸಿದ 'ಸುಪ್ರೀಂ'

ದಾವೂದಿ ಮುಸ್ಲಿಮರಲ್ಲಿ ಸ್ತ್ರೀಯರ ಜನನಾಂಗವನ್ನು ಊನಗೊಳಿಸುವ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೆ ಸೋಮವಾರ ಶಿಫಾರಸ್ಸು ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ದಾವೂದಿ ಮುಸ್ಲಿಮರಲ್ಲಿ ಸ್ತ್ರೀಯರ ಜನನಾಂಗವನ್ನು ಊನಗೊಳಿಸುವ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೆ ಸೋಮವಾರ ಶಿಫಾರಸ್ಸು ಮಾಡಿದೆ. 
ಬೊಹ್ರಾ ಮುಸ್ಲಿಂ ಸಮುದಾಯದ ಅಪ್ರಾಪ್ತ ಬಾಲಕಿಯರ ಜನನಾಂಗದ ಊನಗೊಳಿಸುವಿಕೆ (ಎಫ್'ಜಿಎಂ)ಯ ಪದ್ಧತಿ ಪ್ರಶ್ನಿಸಿ ದೆಹಲಿ ಮೂಲದ ವಕೀಲ ಪಿಐಎಲ್ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರಿದ್ದ ಪೀಠ, ಅದನ್ನು ಸಂವಿಧಾನ ಪೀಠಕ್ಕೆ ಹಸ್ತಾಂತರ ಮಾಡಿದೆ. 
ಜನನಾಂಗ ಊನಗೊಳಿಸುವಕೆಯ ಪದ್ಧತಿಯನ್ನು ಅಪ್ರಾಪ್ತ ಬಾಲಕಿಯರ ಮೇಲೆ ಅಂದರೆ 5 ವರ್ಷದೊಳಗಿನ ಮತ್ತು ಫ್ರೌಡಾವಸ್ಥೆಗೆ ಬರುವುದಕ್ಕೂ ಮೊದಲು ನಡೆಸುತ್ತಾರೆ. ಈ ಪದ್ಧತಿಯು ವಿಶ್ವಸಂಸ್ಥೆ ಮಾನವ ಹಕ್ಕುಗಳ ಘೋಷಣೆಗೆ ವಿರುದ್ಧವಾಗಿದೆ. 
ಪದ್ಧತಿ ಕುರಿತಂತೆ ಈ ಹಿಂದೆ ಸುಪ್ರೀಂಕೋರ್ಟ್ ಮುಂದೆ ಮಾತನಾಡಿದ್ದ ದಾವೂದಿ ಬೊಹ್ರಾ ಮುಸ್ಲಿಂ ಸಮುದಾಯದ ಸದಸ್ಯರು, ಕೆಲವು ಇಸ್ಲಾಂ ಧರ್ಮಗಳ ಪಂಗಡಗಳು ಸ್ತ್ರೀ ಸುನತಿಯನ್ನು ಆಚರಿಸುತ್ತವೆಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com