ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಅವರು, 2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿದ್ದಾರೆ.
ವಿಶ್ವದ ಅತೀ ದೊಡ್ಡ ಆರೋಗ್ಯ ವಿಮೆ 'ಆಯುಷ್ಮಾನ್ ಭಾರತ್' ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸುರುವುದಾಗಿ ತಮಿಳಿಸೈ ಅವರು ಹೇಳಿದ್ದಾರೆ.
ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿಯವರ ಹೆಸರನ್ನು ಶಿಫಾರಸ್ಸು ಮಾಡಲು ತಮ್ಮೊಂದಿಗೆ ಕೈ ಜೋಡಿಸಬೇಕೆಂದು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮೋದಿಯವರ ದೂರದೃಷ್ಟಿಯ ಆಯುಷ್ಮಾನ್ ಭಾರತ ಯೋಜನೆಯು ಕೋಟ್ಯಾಂತರ ಬಡವರ ಬದುಕಿನ ಆಶಾಕಿರಣವಾಗಲಿದೆ. ಇದು ಹಲವರ ಬದುಕನ್ನು ಬದಲಿಸಿದೆ ಎಂದು ತಿಳಿಸಿದ್ದಾರೆ.
ತಮಿಳಿಸೈ ಸೌಂದರರಾಜನ್ ಪತಿ ಡಾ.ಪಿ. ಸೌಂದರರಾಜನ್ ಅವರು ಖಾಸಗಿ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿದ್ದು, ಅವರೂ ಕೂಡ ನೊಬೆಲ್ ಪುರಸ್ಕಾರಕ್ಕಾಗಿ ಮೋದಿಯವರ ಹೆಸರನ್ನು ಸೂಚಿಸಿದ್ದಾರೆಂದು ತಿಳಿದುಬಂದಿದೆ.
2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರನ್ನು ಸೂಚಿಸಲು ಜನವರಿ. 31, 2019 ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ ನಲ್ಲಿ ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗಲಿದೆ.