ಐವರ ಪೈಕಿ ಆಧಾರ್ ಸಿಂಧುತ್ವ ವಿರೋಧಿಸಿದ ಏಕೈಕ ಜಡ್ಜ್: ನ್ಯಾ.ಚಂದ್ರಚೂಡ್ ಅವರ ವಾದವೇನು?

ಆಧಾರ್ ಕಾರ್ಡ್​ಗೆ ಸಂವಿಧಾನದ ಮಾನ್ಯತೆ ನೀಡುವ ವಿಚಾರದಲ್ಲಿ ಐವರು ನ್ಯಾಯಮೂರ್ತಿಗಳ ಪೈಕಿ ನ್ಯಾ. ಚಂದ್ರಚೂಡ್ ಅವರೊಬ್ಬರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆಧಾರ್ ಕಾರ್ಡ್​ಗೆ ಸಂವಿಧಾನದ ಮಾನ್ಯತೆ ನೀಡುವ ವಿಚಾರದಲ್ಲಿ ಐವರು ನ್ಯಾಯಮೂರ್ತಿಗಳ ಪೈಕಿ ನ್ಯಾ. ಚಂದ್ರಚೂಡ್ ಅವರೊಬ್ಬರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಧಾರ್ ಸಿಂಧುತ್ವ ಕುರಿತು ಇಂದು ನಡೆದ ಕಲಾಪದಲ್ಲಿ ಪಂಚ ಸದಸ್ಯರ ಪೀಠದ ಐವರು ನ್ಯಾಯಮೂರ್ತಿಗಳ ಪೈಕಿ ಸಿಜೆಐ ದೀಪಕ್ ಮಿಶ್ರಾ ಸೇರಿದಂತೆ ನ್ಯಾ. ಅಶೋಕ್ ಭೂಷಣ್, ನ್ಯಾ. ಎ.ಕೆ. ಸಿಕ್ರಿ ಮತ್ತು ನ್ಯಾ. ಎ.ಎಂ. ಖಾನ್ವಿಲ್ಕರ್ ಅವರು ಆಧಾರ್ ಸಿಂಧುತ್ವ ಮಾನ್ಯತೆ ಮಾಡುವ ಕುರಿತು ತಮ್ಮ ನಿರ್ಧಾರ ಪ್ರಕಟಿಸಿದರೆ, ನ್ಯಾಯಮೂರ್ತಿ ಚಂದ್ರಚೂಡ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ತಾಂತ್ರಿಕತೆಯ ಅಭಿವೃದ್ಧಿಗಾಗಿ ಸಾಂವಿಧಾನಿಕ ಹಕ್ಕುಗಳ ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟ ಚಂದ್ರಚೂಡ್ ಅವರು, ಆಧಾರ್ ಕಾರ್ಡ್​ಗೆ ಸಂವಿಧಾನದ ಮಾನ್ಯತೆ ಕೊಡಲು ಆಗುವುದಿಲ್ಲ. ಐಟಿ ರಿಟರ್ಸ್​ಗೆ ಆಧಾರ್ ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ 
ಆದರೆ, ಉಳಿದ ನಾಲ್ವರು ನ್ಯಾಯಮೂರ್ತಿಗಳು ಆಧಾರ್​ಗೆ ಮಾನ್ಯತೆ ಕೊಡಲು ತೀರ್ಮಾನಿಸಿದ್ದಾರೆ. ಹೀಗಾಗಿ, 4:1 ಬಹುಮತದೊಂದಿಗೆ ಸಂವಿಧಾನ ಪೀಠವು ಆಧಾರ್ ಕಾರ್ಡ್​ಗೆ ಸಾಂವಿಧಾನಿಕ ಮಾನ್ಯತೆಯ ತೀರ್ಪು ನೀಡಿದೆ.
ಇನ್ನು ಆಧಾರ್ ಮಾಹಿತಿ ಸೋರಿಕೆಯ ಆತಂಕ ವ್ಯಕ್ತಪಡಿಸಿರುವ ಅವರು, ಪ್ರಸ್ತುತ ಆಧಾರ್ ಸುರಕ್ಷತೆಗೆ ಸಂಬಂಧಿಸಿದಂತೆ 'ಸ್ವತಂತ್ರ ನಿಯಂತ್ರಕ ಚೌಕಟ್ಟಿನ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ದತ್ತಾಂಶ ರಕ್ಷಣೆ ಕುರಿತು ತಮಗೆ ಆತಂಕವಿದೆ. ಆಧಾರ್ ಮಾಹಿತಿ ಪಡೆಯುವ ಮೊಬೈಲ್ ಸೇವಾದಾರರು ಕಾಲಾನುಕ್ರಮದಲ್ಲಿ ತಾವು ಸಂಗ್ರಹಿಸಿದ ದತ್ತಾಂಶಗಳನ್ನು ಅಳಿಸಿ ಹಾಕಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಮುಂಜಾಗ್ರತೆ ಕೈಗೊಳ್ಳಬೇಕಿತ್ತು. ದತ್ತಾಂಶ ಸೋರಿಕೆಯಿಂದಾಗಿ ಸಾರ್ವಜನಿಕರ ವೈಯುಕ್ತಿಕ ಹಿತಾಸಕ್ತಿಗಳಿಗೆ ಧಕ್ಕೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ದತ್ತಾಂಶ ದುರ್ಬಳಕೆ ಅಲ್ಲಗಳೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಆಧಾರ್ ಕಡ್ಡಾಯಗೊಳಿಸುವುದರಿಂದ ಆಧಾರ್ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com