ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆಧಾರ್ ನಿಂದ ಖಾಸಗಿತನ ಉಲ್ಲಂಘನೆ ಆಗಲ್ಲ : ಸುಪ್ರೀಂ ತೀರ್ಪಿಗೆ ಯುಐಡಿಎಐ ಸ್ವಾಗತ

ಆಧಾರ್ ಗೆ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದ ಸುಪ್ರಿಂ ಕೋರ್ಟ್‌ ತೀರ್ಪನ್ನು ಗೆಲುವೆಂದು ಯುಐಡಿಎಐ ಸಿಇಓ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ನವದೆಹಲಿ:ಆಧಾರ್ ಗೆ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದ ಸುಪ್ರಿಂ ಕೋರ್ಟ್‌ ತೀರ್ಪನ್ನು ದೊಡ್ಡ  ಗೆಲುವೆಂದು  ಯುಐಡಿಎಐ  ಸಿಇಓ ಅಜಯ್ ಭೂಷಣ್ ಪಾಂಡೆ  ಹೇಳಿದ್ದಾರೆ.

ಆಧಾರ್ ಸಿಂಧುತ್ವ ಕುರಿತು ವಿಭಾಗೀಯ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆದು  ಐವರು ನ್ಯಾಯಾಧೀಶರ ಪೈಕಿ ನಾಲ್ವರು ನ್ಯಾಯಾಧೀಶರು ಆಧಾರ್ ಪರವಾಗಿ ತೀರ್ಪು ನೀಡಿದ್ದರು.
4:1 ರಂತೆ ತೀರ್ಪು ಆಧಾರ್ ಪರವಾಗಿದ್ದು, ಆಧಾರ್ ಗೆ ಸಂವಿಧಾನಿಕ ಮಾನ್ಯತೆ ನೀಡಲು ನ್ಯಾಯಾಲಯ ನಿರ್ಧರಿಸಿತು.

ಇದು ಹಣದ ಬಿಲ್ ಆಗಿದ್ದು, ಪ್ಯಾನ್ ಕಾರ್ಡ್ ಗಾಗಿ  ಬಳಕೆ ಮಾಡಬಹುದಾಗಿದೆ. ಸಮಾಜದ ದುರ್ಬಲ ವರ್ಗದವರು ಹಾಗೂ ಬಡವರು ಸರ್ಕಾರದ ಯೋಜನೆಗಳು ಹಾಗೂ ಸಹಾಯಧನ ಪಡೆದುಕೊಳ್ಳಲು ಇದನ್ನು ಬಳಸಿಕೊಳ್ಳಬಹುದಾಗಿದೆ. ತೆರಿಗೆ ವಿನಾಯಿತಿಯಲ್ಲಿ ಹಾಗೂ ಕಪ್ಪು ಹಣ ತಡೆಗಟ್ಟುವಲ್ಲಿ ಇದನ್ನು ಬಳಸಿಕೊಳ್ಳಹುದಾಗಿದೆ ಎಂದು ಪಾಂಡೆ ತಿಳಿಸಿದರು.

ಆಧಾರ್ ಗೆ ಸಂವಿಧಾನಿಕ ಮಾನ್ಯತೆ ನೀಡಿ ಸುಪ್ರೀಕೋರ್ಟ್ ತೀರ್ಪು ಪ್ರಕಟಿಸಿದ್ದು, ಐವರು ನ್ಯಾಯಾಧೀಶರನ್ನೊಗೊಂಡ ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ , ಸಮಾಜದ ದುರ್ಬಲ ವರ್ಗದವರಿಗೆ ಯೋಜನೆಗಳನ್ನು ತಲುಪಿಸಲು ನೆರವಾಗಲು ಆಧಾರ್ ನೆರವು ನೀಡಲಿದೆ.ವೈಯಕ್ತಿಕವಾಗಿ ಮಾತ್ರವಲ್ಲ, ಸಮುದಾಯದ ದೃಷ್ಟಿಯಿಂದಲೂ ಜನರ ಗೌರವ  ಹೆಚ್ಚಾಗಲಿದೆ ಎಂದು ಹೇಳಿದರು.

ಆಧಾರ್ ನಿಂದ ವ್ಯಕ್ತಿಯ ಖಾಸಗಿತನ  ಮಾಹಿತಿಗಳು ಆರು ತಿಂಗಳ ನಂತರ ಉಳಿದಿರುವುದಿಲ್ಲ ಎಂದು ನ್ಯಾಯಾಧೀಶ ಸಿಕ್ರಿ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಪಾಂಡೆ,  ಯಾವುದೇ ಕಾನೂನಿನ ಬೆಂಬಲವಿಲ್ಲದೆ ಖಾಸಗಿತವನ್ನುಬಹಿರಂಗಗೊಳಿಸುವುದಿಲ್ಲ ನ್ಯಾಯಾಧೀಶ ಶ್ರೀ ಕೃಷ್ಣ ಸಮಿತಿ ಕೂಡಾ ಇದೇ ಸಲಹೆ ನೀಡಿದೆ. ಆಧಾರ್ ಎಕತೆಯ ಸಂಕೇತದಂತಿದ್ದು, ಹೆಚ್ಚಿನ ಮಟ್ಟದ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದು ಪಾಂಡೆ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com