ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಗೆ ಗೃಹ ವ್ಯವಹಾರ ಸಚಿವಾಲಯದ ವಿದೇಶಾಂಗಗಳ ವಿಭಾಗವು ನೋಟಿಸ್ ಜಾರಿಗೊಳಿಸಿದೆ ಬ್ಯಾನರ್ಜಿಯವರ ಪತ್ನಿ ತಾವು ಭಾರತದ ಅಧಿಕೃತ ನಾಗರಿಕತ್ವವನ್ನು ಪಡೆಯಲು ಅರ್ಹ ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸುವ ವೇಳೆ ಸತ್ಯವನ್ನು ಮರೆಮಾಚಿದ್ದಾರೆ ಎಂಬ ಕಾರಣ ಈ ನೋಟಿಸ್ ನೀಡಲಾಗಿದೆ. ಅಭಿಷೇಕ್ ಬ್ಯಾನರ್ಜಿ ಪತ್ನಿ ಸಾಗರೋತ್ತರ ಭಾರತೀಯ ನಾಗರಿಕತ್ವ ದಾಖಲೆ ಹಾಗೂ ಪ್ಯಾನ್ ನಂಬರ್ ಪಡೆದುಕೊಳ್ಳುವ ಸಲುವಾಗಿ ವಂಚಿಸಿದ್ದಾರೆ ಎನ್ನಲಾಗಿದೆ.