ಸಮುದ್ರದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣ!

ಇತ್ತೀಚೆಗಷ್ಟೇ ನೌಕಾದಳ 48 ವರ್ಷಗಳ ಬಳಿಕ ಅಮೆರಿಕಾದ ಅತ್ಯಾಧುನಿಕ MH-60R ಹೆಲಿಕಾಪ್ಟರ್ ಗಳ ಸೇರ್ಪಡೆಗೆ ಅಂಕಿತ ಹಾಕಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೌಕಾದಳ, ಸಮುದ್ರದದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇತ್ತೀಚೆಗಷ್ಟೇ ನೌಕಾದಳ 48 ವರ್ಷಗಳ ಬಳಿಕ  ಅಮೆರಿಕಾದ ಅತ್ಯಾಧುನಿಕ MH-60R ಹೆಲಿಕಾಪ್ಟರ್ ಗಳ ಸೇರ್ಪಡೆಗೆ ಅಂಕಿತ ಹಾಕಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೌಕಾದಳ, ಸಮುದ್ರದದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಮುಂದಾಗಿದೆ.
ಹೌದು.. ನೌಕಾಸೇನೆಯ ಮತ್ತೊಂದು ಬಹುದೊಡ್ಡ ಪ್ರಾಜೆಕ್ಟ್​ ಗೆ ಚಾಲನೆ ನೀಡಲಾಗಿದ್ದು, ನೌಕಾಸೇನೆಯು ತನ್ನ ಬತ್ತಳಿಕೆಗಾಗಿ ಆರು ಮಾರಣಾಂತಿಕ, ಅತ್ಯಾಧುನಿಕ ಜಲಾಂತರ್ಗಾಮಿಗಳ ನಿರ್ಮಾಣ ಮಾಡುವ ಯೋಜನೆಗೆ ಕೈಹಾಕಿದೆ. ಮೂಲಗಳ ಪ್ರಕಾರ ಸೇನೆಯು ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್​ ಕರೆಯಲಾಗಿದ್ದು, ಆಸಕ್ತಿ ಹೊಂದಿರುವ ಜಲಾಂತರ್ಗಾಮಿ ತಯಾರು ಮಾಡುವ ಎಲ್ಲಾ ವಿದೇಶ ಕಂಪನಿಗಳಿಗೂ ಆಹ್ವಾನ ನೀಡಲಾಗಿದೆ.
ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ -75ನ ಅಡಿಯಲ್ಲಿ, 6 ಡೀಸೆಲ್-ವಿದ್ಯುತ್ ಜಲಾಂತರ್ಗಾಮಿಗಳನ್ನು ಉತ್ಪಾದಿಸಬೇಕೆಂಬ ಗುರಿ ಹೊಂದಲಾಗಿದೆ.  ಈಗಾಗಲೇ ಮುಂಬೈನಲ್ಲಿ ನಿರ್ಮಾಣ ಆಗುತ್ತಿರುವ ಸ್ಕಾರ್ಪಿಯನ್ ಕ್ಲಾಸ್ ಸಬ್ ಮೆರಿನ್ ಗಳಿಗಿಂತ 50 ಪಟ್ಟು ಈ ಯೋಜನೆ ದೊಡ್ಡದಾಗಿದೆ. ನೌಕಾಪಡೆಯು 500 ಕಿಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳಿಗೆ ಹೊಂದಿಸಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.
ಸಬ್​ ಮರಿನ್ ತಯಾರು ಮಾಡಲು ಸಿದ್ಧ ಇರುವ ಎಲ್ಲಾ ವಿದೇಶಿಗರಿಗೆ ಹಾಗೂ ಭಾರತೀಯರಿಗೆ ಪ್ರಾಜೆಕ್ಟ್​ ನ ಡ್ರಾಫ್ಟ್​ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ ದೇಶದ ಪಾಲುದಾರರು ಕೂಡ ಸಲಹೆ ಸೂಚನೆಗಳನ್ನ ನೀಡುವಂತೆಯೂ ಮನವಿ ಮಾಡಲಾಗಿದೆ. ಹೆವಿ ಡ್ಯೂಟಿಯ ಫೈರ್ ಪವರ್ ಹೊಂದಿರುವುದರ ಜೊತೆಗೆ, 12 ಲ್ಯಾಂಡ್​​ ಅಟ್ಯಾಕ್ ಕ್ರೂಸ್ ಕ್ಷಿಪಣಿ (LACM) ಆ್ಯಂಟಿ-ಶಿಪ್ ಕ್ರೂಸ್ ಮಿಸೈಲ್​ (ASCM) ಹೊಂದಿರಲು ಬಯಸಿದೆ. ಹಾಗೆ ಈ ಜಲಾಂತರ್ಗಾಮಿ 18 ಹೆವಿ-ವೇಟ್​​​ ಟಾರ್ಪಿಡೋಗಳನ್ನ ಕೊಂಡೊಯ್ಯುವುದು ಮತ್ತು ಲಾಂಚ್​ ಮಾಡುವ ಎಲ್ಲಾ ರೀತಿಯ ವ್ಯವಸ್ಥೆ ಇರುವಂತಹ ಯೋಜನೆ ಇದಾಗಿದೆ.
ಇನ್ನು ಭಾರತದ ಬಳಿ 100 ಸಬ್ ಮೆರಿನ್ ಗಳಿದ್ದು, ಪಾಕಿಸ್ತಾನ ಸೇನೆಯ ಬಳಿ 20 ಸಬ್ ಮೆರಿನ್ ಗಳಿವೆ. ಭಾರತದ ಸಬ್ ಮೆರಿನ್ ಯೋಜನೆಗಳ ಮೇಲೆ ಚೀನಾ ಕಣ್ಣಿಟ್ಟಿದ್ದು, ಎಲ್ಲಿ ತನ್ನ ಪ್ರಾಬಲ್ಯಕ್ಕೆ ಭಾರತ ಕುತ್ತು ತರುತ್ತದೆಯೋ ಎಂದು ಕಳವಳದಿಂದ ನೋಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com