ಉತ್ತರ ಪ್ರದೇಶ: ಶ್ವಾನ ಕೊಟ್ಟ ಎಚ್ಚರಿಕೆ 30 ಜೀವಗಳನ್ನುಳಿಸಿತು!

ನಾಯಿಗಳು ಮಾನವನ ಅತ್ಯಂತ ಪ್ರೀತಿಯ ಸ್ನೇಹಿತ ಎಂದು ನಾವು ಆಗಾಗ ಹೇಳುವುದನ್ನು ಕೇಳಿದ್ದೇವೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಇದಕ್ಕೆ ಹೊಸದೊಂದು ನಿದರ್ಶನವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಂದಾ (ಉತ್ತರ ಪ್ರದೇಶ): ನಾಯಿಗಳು ಮಾನವನ ಅತ್ಯಂತ ಪ್ರೀತಿಯ ಸ್ನೇಹಿತ ಎಂದು ನಾವು ಆಗಾಗ ಹೇಳುವುದನ್ನು ಕೇಳಿದ್ದೇವೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಇದಕ್ಕೆ ಹೊಸದೊಂದು ನಿದರ್ಶನವಾಗಿದೆ.
ಕಟ್ಟಡವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹೊತ್ತಿದ್ದ ಬೆಂಕಿಯಿಂದ ಕುಪಿತವಾದ ಸಾಕು ನಾಯಿಯೊಂದು  30 ಕ್ಕಿಂತಲೂ ಹೆಚ್ಚು ಜೀವಗಳನ್ನು ಉಳಿಸಿ ತಾನು ಪ್ರಾಣಬಿಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
"ಗ್ಯಾಸ್ ಸಿಲೆಂಡರ್ ಸೋರಿಕೆಯಾಗುತ್ತಿದ್ದಂತೆ ಎಚ್ಚರಗೊಂಡ ನಾಯಿ ಕಟ್ಟಡದಲ್ಲಿನ ಎಲ್ಲರನ್ನೂ ಎಚ್ಚರಿಸಿ ಅವರು ಸುರಕ್ಷಿತವಾಗಿ ಕಟ್ಟಡದಿಂದಾಚೆ ತೆರಳುವುದಕ್ಕೆ ಸಹಕರಿಸಿದೆ, ಬಳಿಕ ಸಿಲಿಂಡರ್ ಸ್ಪೋಟವಾದಾಗ ನಾಯಿ ತಾನು ಪ್ರಾಣಬಿಟ್ಟಿದೆ" ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕಟ್ಟಡದ ನೆಲಮಹಡಿ ಹಾಗೂ ಮೊದಲ ಅಂತಸ್ತಿನಲ್ಲಿ ಪೀಠೋಪಕರಣಗಳ ಕಾರ್ಖಾನೆ ಇದ್ದರೆ ಎರಡನೇ ಅಂತಸ್ತಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿ ಇತ್ತು.ಮೂರು, ನಾಲ್ಕನೇ ಮಹಡಿಗಳಲ್ಲಿ ಮನೆಗಳಿದ್ದು ಜನವಸತಿ ಪ್ರದೇಸವಾಗಿತ್ತು.
ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿದ್ದು ನೆಲಮಹಡಿಯಲ್ಲಿ ಜೋಡಿಸಲಾಗಿದ್ದ ಸಿಲೆಂಡರ್ ಕಾರಣ ಬೆಂಕಿ ವ್ಯಾಪಕವಾಗಿ ಹರಡಿದೆ.ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಹತ್ತಿರದಲ್ಲಿದ್ದ ನಾಲ್ಕು ಕಟ್ಟಡಗಳಿಗೆ ಸಹ ಬೆಂಕಿ ತಗುಲಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.
ಬೆಂಕಿ ಆರಿಸುವ ಕಾರ್ಯ ಪ್ರಗತಿಯಲ್ಲಿದೆ, ಅಗ್ನಿಶಾಮಕ ದಳ ಕಟ್ಟಡ ಮಾಲೀಕನು ನಿಯಮಗಳನ್ನು ಅನುಸರಿಸದೆ ಅಕ್ರಮ ಪೀಠೋಪಕರಣ ಕಾರ್ಖಾನೆಯನ್ನು ನಡೆಸುತ್ತಿರುವ ಆರೋಪದ ಮೇಲೆ  ಆತನ ವಿರುದ್ಧ  ಎಫ್ಐಆರ್ ದಾಖಲಿಸಲು  ತೀರ್ಮಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com