ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ್ ಪಾಂಡೆ ಪೊಲೀಸ್‌ ವಶಕ್ಕೆ

ಶಾಂತಿಗೆ ಭಂಗ ತರುವ ಆತಂಕದಿಂದ ಸಮಾಜ ಸೇವಕ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ್  ಪಾಂಡೆ ಅವರನ್ನು ಸ್ಥಳೀಯ ಪೊಲೀಸರು ವಶಕ್ಕೆ  ಪಡೆದಿದ್ದಾರೆ.
ಸಂದೀಪ್  ಪಾಂಡೆ
ಸಂದೀಪ್  ಪಾಂಡೆ
Updated on

ಅಯೋಧ್ಯೆ: ಶಾಂತಿಗೆ ಭಂಗ ತರುವ ಆತಂಕದಿಂದ ಸಮಾಜ ಸೇವಕ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ್  ಪಾಂಡೆ ಅವರನ್ನು ಸ್ಥಳೀಯ ಪೊಲೀಸರು ವಶಕ್ಕೆ  ಪಡೆದಿದ್ದಾರೆ.

ಆಗಸ್ಟ್ 17 ಮತ್ತು 18 ರಂದು ವಿವಾದಿತ ಸ್ಥಳದ ಬಳಿ ಆಯೋಜಿಸಲಾಗಿದ್ದ ಸದ್ಭಾವನಾ ಸಮ್ಮೇಳನದ ಮುಖ್ಯ ಅತಿಥಿಯಾಗಿ ಸಂದೀಪ್ ಪಾಂಡೆ ಭಾಗವಹಿಸಿದ್ದರು. ಭದ್ರತಾ  ಕಾರಣಗಳಿಂದಾಗಿ ಜಿಲ್ಲಾಡಳಿತ ಸಮ್ಮೇಳನಕ್ಕೆ ಅನುಮತಿಯನ್ನು ನಿರಾಕರಿಸಿ  ಪಾಂಡೆ ಅವರನ್ನು ಮತ್ತೆ ಲಖನೌಗೆ ಕಳುಹಿಸಲಾಗಿತ್ತು. ಪಾಂಡೆ ಮತ್ತು ಅವರ ಸಹಚರರು ಪೊಲೀಸರಿಗೆ ಮಾಹಿತಿ ನೀಡದೆ ರಹಸ್ಯವಾಗಿ ಸಮ್ಮೇಳನವನ್ನು ಆಯೋಜಿಸಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಮಾಹಿತಿ ಪಡೆದು ಪಾಂಡೆ ಅವರನ್ನು ವಶಕ್ಕೆ ತೆಗೆದುಕೊಂಡು ಲಖನೌಗೆ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com