ಐಎನ್ಎಕ್ಸ್ ಪ್ರಕರಣ: ಚಿದಂಬರಂ, ಕಾರ್ತಿ ತನಿಖೆಗಾಗಿ ವಿದೇಶಗಳಿಂದ ಮಾಹಿತಿ ಪಡೆಯಲಿರುವ ಸಿಬಿಐ 

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ, ಕಾರ್ತಿ ಚಿದಂಬರಂ ಅವರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ 5 ರಾಷ್ಟ್ರಗಳ ನೆರವು ಕೋರಲು ಮುಂದಾಗಿದೆ.
ಚಿದಂಬರಂ
ಚಿದಂಬರಂ

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ, ಕಾರ್ತಿ ಚಿದಂಬರಂ ಅವರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ 5 ರಾಷ್ಟ್ರಗಳ ನೆರವು ಕೋರಲು ಮುಂದಾಗಿದೆ.

ವಿದೇಶಗಳಲ್ಲಿರುವ ಹಲವು ಕಂಪನಿಗಳಿಂದ ಚಿದಂಬರಂ, ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದಕ್ಕೆ ಸಿಬಿಐ ಯತ್ನಿಸುತ್ತಿದ್ದು, ಈ ಪೈಕಿ ಬ್ರಿಟನ್, ಸ್ವಿಟ್ಜರ್ ಲ್ಯಾಂಡ್, ಬರ್ಮುಡಾ, ಮಾರಿಷಸ್, ಸಿಂಗಪೂರ್ ಇವೆ. 

ಈ ಮೇಲಿನ ಎಲ್ಲಾ ರಾಷ್ಟ್ರಗಳಲ್ಲಿಯೂ ಚಿದಂಬರಂ, ಕಾರ್ತಿ ಚಿದಂಬರಂಗೆ ಸಂಬಂಧಪಟ್ಟ ನಕಲಿ ಸಂಸ್ಥೆಗಳಿವೆಯೇ? ಅಲ್ಲಿನ ಬ್ಯಾಂಕ್ ಗಳೊಂದಿಗೆ ಇವರ ವ್ಯವಹಾರ ಇದೆಯೇ ಎಂಬುದರ ಬಗ್ಗೆ ಸಿಬಿಐ ಮಾಹಿತಿ ಪಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com