
ತಿರುಪತಿ: ವಿಶ್ವ ಪ್ರಸಿದ್ಧ ತಿರುಮಲ ದೇವಸ್ಥಾನದ ಲಡ್ಡು ತಯಾರಿಸುವ ಅಡುಗೆ ಕೋಣೆಯಲ್ಲಿ ಅಗ್ನಿ ಅವಘಟ ಸಂಭವಿಸಿದ್ದು, ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ಬೆಂಕಿಯ ಪರಿಣಾಮ ನೋಡನೋಡುತ್ತಿದ್ದಂತೆಯೇ ದಟ್ಟ ಹೊಗೆ ಮತ್ತು ಬೆಂಕಿ ಕೋಣೆಯನ್ನು ಆವರಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯ ಕೆನ್ನಾಲಿಗೆ ಹರಡದಂತೆ ನಿಯಂತ್ರಿಸಿದ್ದಾರೆ.
ಬೆಂಕಿ ಅವಘಟಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಆದರೂ, ಪ್ರಾಥಣಿಕ ತನಿಖೆಯ ಪ್ರಕಾರ ಲಡ್ಡು ತಯಾರಿಕೆ ವೇಳೆ ಸಿಬ್ಬಂದಿಯೋರ್ವ ದೊಡ್ಡ ಪಾತ್ರೆಯಲ್ಲಿ ಎಣ್ಣೆ ಸುರಿಯುತ್ತಿದ್ದ ಸಂದರ್ಭದಲ್ಲಿ ಒಲೆಯ ಬೆಂಕಿ ತಾಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಇದು ಕೋಣೆಯಲ್ಲಿ ಶೇಖರಿಸಿಟ್ಟಿದ್ದ ತುಪ್ಪ ಮತ್ತು ಎಣ್ಣೆಯ ಡಬ್ಬಗಳಿಗೂ ವ್ಯಾಪಾಸಿದೆ. ಜಾಗೃತಗೊಡ ಸಿಬ್ಬಂದಿ ಒಲೆಗಳನ್ನೆಲ್ಲವನ್ನೂ ನಂದಿಸಿದರೂ ಅಗ್ನಿಯ ತೀವ್ರತೆ ತಡೆಯಲು ಸಾಧ್ಯವಾಗಿಲ್ಲ. ಘಟನೆ ಕುರಿತು ದೇವಸ್ಥಾನ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
Advertisement