ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕಕ್ಕೆ ಕೇಂದ್ರ ಸಂಪುಟ ಅಸ್ತು
ನವದೆಹಲಿ: ಮಿಲಿಟರಿ ಸುಧಾರಣೆಯ ಕುರಿತು ಮಹತ್ವದ ಉಪಕ್ರಮಗಳ ತೆಗೆದುಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಮಂಗಳವಾರ ರಕ್ಷಣಾ ಮುಖ್ಯಸ್ಥರ ಹುದ್ದೆ ನೇಮಕಕ್ಕೆ ಅನುಮೋದನೆ ಕೊಟ್ಟಿದೆ. ಕೇಂದ್ರ ಸಂಪುಟ ಈ ಹುದ್ದೆ ನೇಮಕಕ್ಕೆ ಅನುಮೋದನೆ ನೀಡಿರುವುದು ರಕ್ಷಣಾ ನಿರ್ವಹಣೆ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ನಡೆಯುವ ಪ್ರಮುಖ ಬದಲಾವಣೆಯಾಗಿದೆ.
"4-ಸ್ಟಾರ್ ಜನರಲ್ ಶ್ರೇಣಿಯ ರಕ್ಷಣಾ ಮುಖ್ಯಸ್ಥರ ಹುದ್ದೆಯನ್ನು ಸೇವಾ ಮುಖ್ಯಸ್ಥರಿಗೆ ಸಮಾನವಾದ ವೇತನದೊಡನೆ ರಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಇವರು ಮಿಲಿಟರಿ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಇವರು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. " ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಕ್ಯಾಬಿನೆಟ್ ಸಭೆಯ ನಂತರ ಹೇಳಿದರು
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯನ್ನು ಅಂಗೀಕರಿಸಿದ ನಂತರ ಈ ಅನುಮೋದನೆ ನೀಡಲಾಗಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಿಡಿಎಸ್ ನೇಮಕ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದರು.
1999 ರಯುದ್ಧದ ನಂತರ ರಚಿಸಲಾದ ಕಾರ್ಗಿಲ್ ಪರಿಶೀಲನಾ ಸಮಿತಿಯು ಸಿಡಿಎಸ್ ಗಾಗಿ ಬೇಡಿಕೆ ಇಟ್ಟಿತ್ತು.
ಸಿಡಿಎಸ್ ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿರುವ ರಕ್ಷಣಾ ಸ್ವಾಧೀನ ಮಂಡಳಿ ಮತ್ತು ಎನ್‌ಎಸ್‌ಎ ಅಧ್ಯಕ್ಷತೆಯ ರಕ್ಷಣಾ ಯೋಜನಾ ಸಮಿತಿಯ ಸದಸ್ಯರಾಗಲಿದ್ದಾರೆ. ಆದರೆ, ಜನರಲ್ ಮಲಿಕ್ ಸಿಡಿಎಸ್‌ಗೆ ಆರ್ಥಿಕ ಅಧಿಕಾರವನ್ನು ನೀಡಬೇಕೆಂದು ಸೂಚಿಸುತ್ತಾನೆ. ಬಂಡವಾಳ ಸ್ವಾಧೀನಪಡಿಸಿಕೊಳ್ಳುವಿಕೆ , ತರಬೇತಿ ಮತ್ತು ಸೇವೆಗಳಿಗೆ ಸಿಬ್ಬಂದಿ ಹೊರತುಪಡಿಸಿ ಸೇವೆಗಳಿಗೆ ಮೀಸಲಾದ ಖರೀದಿಗಳನ್ನು ಸಿಡಿಎಸ್ ನೋಡಿಕೊಳ್ಳಬೇಕಿದೆ. ಸಿಡಿಎಸ್ ಮುಖ್ಯಸ್ಥಸಿಬ್ಬಂದಿ ಸಮಿತಿಯ ಖಾಯಂ ಅಧ್ಯಕ್ಷರಾಗಲಿದ್ದು, ಎಲ್ಲಾ ಮೂರು ಸೇನಾ ವಿಷಯಗಳಲ್ಲಿ ರಕ್ಷಣಾ ಸಚಿವರ ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೂವರು ಸೇನಾ ಮುಖ್ಯಸ್ಥರು ತಮ್ಮ ಸೇವೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಚಿವರಿಗೆ ಸಲಹೆ ನೀಡುವುದನ್ನು ಮುಂದುವರಿಸುತ್ತಾರೆ. ಸಿಡಿಎಸ್ ಮೂವರು ಸೇವಾ ಮುಖ್ಯಸ್ಥರಹೊರತಾಗಿ ಯಾವುದೇ ಮಿಲಿಟರಿ ಆಜ್ಞೆಯನ್ನು ನಿರ್ವಹಿಸುವುದಿಲ್ಲ. ಆದರೆ ಸೈಬರ್ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದಮೂರು ಸೇನೆಗಳ ಆಡಳಿತವು ಸಿಡಿಎಸ್ ಅಧೀನದಲ್ಲಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ