ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೆಲ್ಲರೂ ಹಿಂದೂಗಳೇ: ಮೋಹನ್ ಭಾಗ್ವತ್

ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಎಂದು ರಾಷ್ಚ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೈದರಾಬಾದ್: ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಎಂದು ರಾಷ್ಚ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಆರ್ ಎಸ್ಎಸ್ ಮೂರು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಮೋಹನ್ ಭಾಗ್ವತ್ ಅವರು, ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾಗಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬುದು ಪ್ರಸಿದ್ಧ ವಾಕ್ಯ. ಆದರೆ ನಮ್ಮ ದೇಶ ಇದಕ್ಕಿಂತ ಒಂದು ಹೆಜ್ಜೆ ಮುಂದಿದೆ. ವೈವಿಧ್ಯತೆಯಲ್ಲಿ ಏಕತೆ ಮಾತ್ರವಲ್ಲ, ಏಕತೆಯಲ್ಲೇ ವೈವಿಧ್ಯತೆಯಾಗಿದೆ. ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಹುಡುಕುತ್ತಿಲ್ಲ, ವೈವಿಧ್ಯತೆಯು ಬಂದ ಏಕತೆಯನ್ನು ನಾವು ಹುಡುಕುತ್ತಿದ್ದೇವೆ. ಭಾರತದ 130 ಕೋಟಿ ಜನರು ತಮ್ಮ ಧರ್ಮ ಮತ್ತು ಅವರ ಸಂಸ್ಕೃತಿಯನ್ನು ಲೆಕ್ಕಿಸದೆ ಹಿಂದೂ ಸಮಾಜದ ಭಾಗವಾಗಿದ್ದಾರೆ ಎಂದು ಸಂಘ ನಂಬಿದೆ. ನಾನು ಹಿಂದೂ ಸಮಾಜ, ಭಾರತವನ್ನು ತಮ್ಮ ತಾಯಿನಾಡು ಎಂದು ಪರಿಗಣಿಸಿದಾಗ, ಅದರ ನೀರು, ಅರಣ್ಯ ಮತ್ತು ಪ್ರಾಣಿಗಳನ್ನು ಪ್ರೀತಿಸುವವರಿಗೆ, ರಾಷ್ಟ್ರೀಯ ಮನೋಭಾವವನ್ನು ಹೊಂದಿರುವ ಮತ್ತು ಭಾರತದ ಸಂಸ್ಕೃತಿಯನ್ನು ಗೌರವಿಸುವವರಿಗೆ ಈ ಭಾವನೆ ಬರುತ್ತದೆ ಎಂದು ಹೇಳಿದರು.

'ಅದು ಯಾರೇ ಆಗಿರಲಿ, ಯಾವುದೇ ಭಾಷೆ ಮಾತನಾಡುವವರಾಗಿರಲಿ, ಯಾವುದೇ ಪ್ರಾಂತ್ಯಕ್ಕೆ ಸೇರಿದವರಾಗಿರಲಿ, ಅವರ ಹಿಂದೂ ಧರ್ಮದ ಭಾರತಾ ಮಾತೆಯ ಮಗ. ಈ ಅರ್ಥದಲ್ಲಿ, ಸಂಘಕ್ಕೆ 130 ಕೋಟಿ ಜನರ ಇಡೀ ಸಮಾಜವು ಹಿಂದೂ ಸಮಾಜವಾಗಿದೆ. ಆರ್‌ಎಸ್‌ಎಸ್ ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ ಮತ್ತು ಎಲ್ಲರನ್ನೂ ಒಟ್ಟಿಗೆ ಇರಿಸಲು ಬಯಸಿದೆ. ಆರ್‌ಎಸ್‌ಎಸ್ ಭಾರತಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಧರ್ಮವನ್ನು ಗೆಲ್ಲಲು ಯಾವಾಗಲೂ ಬಯಸುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ರವೀಂದ್ರ ನಾಥ್ ಟ್ಯಾಗೋರ್ ಅವರನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ರಾಜಕೀಯ ಮಾತ್ರ ಎಂದಿಗೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ದೇಶದ ಜನರು ಮಾತ್ರ ಬದಲಾವಣೆಯನ್ನು ತರಬಹುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com