
ನವದೆಹಲಿ: ಹೊಸ ವರ್ಷದ ಮುನ್ನಾದಿನ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶ್ಕಿಂಗ್ ನ್ಯೂಸ್ ಕೊಟ್ಟಿದೆ. ರಾಇಲ್ವೆ ಇಲಾಖೆ ತನ್ನೆಲ್ಲಾ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಘೊಷಣೆ ಹೊರಡಿಸಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ,ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಏರಿಕೆ ನಾಳೆ (ಜನವರಿ 1, 2020) ರಿಂದ ಜಾರಿಗೆ ಬರಲಿದೆ.
ಮಂಗಳವಾರ ಇಲಾಖೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ, ನಾನ್ ಎಸಿ ರಲು ದರಗಳು ಪ್ರತಿ ಕಿ.ಮೀ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಿದೆ.
ರೈಲ್ವೆ ಮೇಲ್ / ಎಕ್ಸ್‌ಪ್ರೆಸ್ ಎಸಿ ರಹಿತ ರೈಲುಗಳ ದರದಲ್ಲಿ ಎರಡು ಪೈಸೆ / ಕಿಮೀ ಹೆಚ್ಚಳ ಮತ್ತು ಎಸಿ ತರಗತಿಗಳ ದರದಲ್ಲಿ ನಾಲ್ಕು ಪೈಸೆ / ಕಿಮೀ ಹೆಚ್ಚಳವನ್ನು ಇಲಾಖೆ ಘೋಷಿಸಿದೆ.
ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳ ಶುಲ್ಕವೂ ಹೆಚ್ಚಳವಾಗಲಿದೆ.
1,447 ಕಿ.ಮೀ ದೂರ ಕ್ರಮಿಸುವ ವ ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್ಪ್ರೆಸ್ ಪ್ರತಿ ಕಿ.ಮೀ.ಗೆ 4 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಎಂದರೆ ಅಂದಾಜು 58 ರು. ಹೆಚ್ಚಳವಾಗಲಿದೆ.
ಇನ್ನು ಆದೇಶದಂತೆ ರಿಸರ್ವೇಷನ್ ಶುಲ್ಕ ಮತ್ತು ಸೂಪರ್‌ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ದರಗಳ ಹೆಚ್ಚಳವು ಈಗಾಗಲೇ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ.
Advertisement