ಅಣ್ಣ ಹಜಾರೆ ಉಪವಾಸ ಸತ್ಯಾಗ್ರಹ: ಬಿಪಿ, ಶುಗರ್ ಗಣನೀಯ ಏರಿಕೆ; ವೈದ್ಯರ ಆತಂಕ

ಲೋಕಪಾಲ, ಲೋಕಾಯುಕ್ತ ನೇಮಕಾತಿಯನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನಿರಶನ ಮೂರನೇ ದಿನಕ್ಕೆ ತಲುಪಿದೆ. ಜೊತೆಗೆ ಅವರ ರಕ್ತದೊತ್ತಡ, ...
ಅಣ್ಣ ಹಜಾರೆ
ಅಣ್ಣ ಹಜಾರೆ
Updated on
ನವದೆಹಲಿ: ಲೋಕಪಾಲ, ಲೋಕಾಯುಕ್ತ ನೇಮಕಾತಿಯನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನಿರಶನ ಮೂರನೇ ದಿನಕ್ಕೆ ತಲುಪಿದೆ. ಜೊತೆಗೆ ಅವರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಗಮನಾರ್ಹವಾಗಿ ಏರಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಹ್ಮದ್‌ನಗರ ಜಿಲ್ಲೆಯ ರಾಳೇಗಣ ಸಿದ್ದಿಯಲ್ಲಿ ಕಳೆದ ಬುಧವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಜಾರೆ, ಕೇಂದ್ರ ಮತ್ತು ರಾಜ್ಯದಲ್ಲಿ  ಲೋಕಪಾಲ ಮತ್ತು ಲೋಕಾಯುಕ್ತರ ನೇಮಕಾತಿ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ. 
ಕೃಷಿ ಬಿಕ್ಕಟ್ಟನ್ನು ನಿವಾರಿಸಲು ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಸರಕಾರ ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ.  ಅಪಾರ ಸಂಖ್ಯೆಯ ಸ್ಥಳೀಯರು ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com