ಶಾಕಿಂಗ್: ಆಸ್ಟ್ರೇಲಿಯಾ ವೀಸಾ ಪಡೆಯಲು ಪಂಜಾಬ್ ಅಣ್ಣ-ತಂಗಿ ಮಾಡಿದ್ದೇನು?

ವಿದೇಶಕ್ಕೆ ತೆರಳಬೇಕೆಂಬುದು ಹಲವರ ಬಹುದಿನಗಳ ಕನಸಾಗಿರುತ್ತದೆ, ಈ ಕನಸು ನನಸು ಮಾಡಿಕೊಳ್ಳಲು ಹಲವು ದಾರಿ ಹಿಡಿಯಲಾಗುತ್ತದೆ. ಆಸ್ಟ್ರೇಲಿಯಾ ವೀಸಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಚಂಡಿಗಡ: ವಿದೇಶಕ್ಕೆ ತೆರಳಬೇಕೆಂಬುದು ಹಲವರ ಬಹುದಿನಗಳ ಕನಸಾಗಿರುತ್ತದೆ. ಈ ಕನಸು ನನಸು ಮಾಡಿಕೊಳ್ಳಲು ಜನರು ಹಲವು ದಾರಿ ಕಂಡುಕೊಳ್ಳುತ್ತಾರೆ. ಆಸ್ಟ್ರೇಲಿಯಾ ವೀಸಾ ಪಡೆಯಲು ಪಂಜಾಬಿನ ಅಣ್ಣ -ತಂಗಿ ಮಾಡಿದ ಕೆಲಸ ಆಘಾತಕಾರಿಯಾಗಿದೆ.
ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಜೊತೆ ವಿವಾಹವಾಗಿದೆ ಎಂದು ನಕಲಿ ದಾಖಲೆ ಸೃಷ್ಠಿಸಿ ತನ್ನ ಆಸೆ ಪೂರೈಸಿಕೊಂಡಿದ್ದು, ಈಗ ಯುವತಿ ಸಿಕ್ಕಿಬಿದ್ದ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಯುವತಿಯ ಸೋದರ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದನು. ಹೀಗಾಗಿ ತಾನೂ ಆಸ್ಟ್ರೇಲಿಯಾಗೆ ತೆರಳಬೇಕೆಂಬ ಬಯಕೆ ಹೊಂದಿದ್ದ ಯುವತಿ, ಸಹೋದರನೊಂದಿಗೆ ಮದುವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾಳೆ.
ಅದರಂತೆಯೇ ಆಕೆ ತಮ್ಮ ಮದುವೆಯನ್ನು ನೋಂದಾಯಿಸಲು ಪಂಜಾಬ್ ನ ನ್ಯಾಯಾಲಯಕ್ಕೆ ಆಸ್ಟ್ರೇಲಿಯಾದ ವೀಸಾವನ್ನು ಹೊಂದಿದ್ದ ಅಣ್ಣನ ದಾಖಲೆಗಳನ್ನು ಉಪಯೋಗಿಸಿಕೊಂಡಿದ್ದಾಳೆ. ಬಳಿಕ ಪಾಸ್‍ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದಾಳೆ.
ಯುವತಿಯ ಮೋಸದ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಸಾಮಾಜಿಕ, ಕಾನೂನು ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾಳೆ. ವಿದೇಶಕ್ಕೆ ಹೋಗಬೇಕೆಂಬ ಹುಚ್ಚು ಹಠದಿಂದ ಈ ರೀತಿ ಮಾಡಿದ್ದಾಳೆ. ಸದ್ಯಕ್ಕೆ ನಾವು ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ.
ಅವರು ನೀಡಿದ್ದ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿರುವ 1500 ಕ್ಕಿಂತ ಹೆಚ್ಚು ವಿದೇಶಿಯರ ವೀಸಾಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com