ಸಿಮಿ ಸಂಘಟನೆ ವಿರುದ್ಧದ ನಿಷೇಧ ಮತ್ತೆ 5 ವರ್ಷ ವಿಸ್ತರಣೆ

ದೇಶದಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕುಖ್ಯಾತ ಉಗ್ರ ಸಂಘಟನೆ ಸಿಮಿ (ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕುಖ್ಯಾತ ಉಗ್ರ ಸಂಘಟನೆ ಸಿಮಿ (ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ.
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಶುಕ್ರವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸಿಮಿ ಮುಖಂಡರು ಭಾಗಿಯಾಗಿರುವ 58 ಪ್ರಕರಣಗಳನ್ನು ಪಟ್ಟಿ ಮಾಡಿದೆ. ಕೋಮುಸೌಹಾರ್ದ ಕದಡುವ ಮೂಲಕ ಸಿಮಿ ಸಂಘಟನೆಯು ದೇಶದ ಜನರ ಮನಸ್ಸುಗಳನ್ನು ಕದಡುತ್ತಿದೆ, ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿದೆ ಎಂದು ಹೇಳಿದೆ.
ಅಂತೆಯೇ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಸಿಮಿ ಭಾಗಿಯಾಗಿದ್ದು, ಇದೇ ಕಾರಣಕ್ಕೆ ತಕ್ಷಣವೇ ಸಿಮಿಯನ್ನು ನಿಷೇಧಿತ ಸಂಘಟನೆ ಎಂದು ಘೋಷಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
2014ರಲ್ಲಿ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸ್ಫೋಟ, 2017ರಲ್ಲಿ ಗಯಾದಲ್ಲಿ ಸರಣಿ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಿಮಿ ಉಗ್ರರು ಭಾಗಿಯಾಗಿದ್ದಾರೆ. 2014ರ ಫೆ.1ರಂದು ಸಿಮಿಯನ್ನು ಕೇಂದ್ರ ಸರಕಾರ ಐದು ವರ್ಷ ಅವಧಿಗೆ ನಿಷೇಧಿಸಿತ್ತು. ಅದರ ಅವಧಿ ಗುರುವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ನಿಷೇಧವನ್ನು ಪುನಃ ಐದು ವರ್ಷಕ್ಕೆ ವಿಸ್ತರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com