ಲಕ್ನೊ: ಪ್ರಧಾನಿ ಮೋದಿಯನ್ನು ಹೊಗಳಿದ ಮುಲಾಯಂಗೆ ಪೋಸ್ಟರ್ ಮೂಲಕ ಧನ್ಯವಾದ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿ...
ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್
ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್
Updated on

ಲಕ್ನೊ; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿ ಪ್ರಧಾನ ಮಂತ್ರಿಯಾಗಲಿ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಸಂಸತ್ತಿನಲ್ಲಿ ಹೊಗಳಿದ ನಂತರ ಅವರ ಭಾವಚಿತ್ರವನ್ನು ನೇತುಹಾಕಿ ಧನ್ಯವಾದ ಹೇಳುವ ಸಂದೇಶಗಳು ಲಕ್ನೊ ನಗರದಲ್ಲಿ ಅಲ್ಲಲ್ಲಿ ಕಾಣುತ್ತಿದೆ.

ಮುಲಾಯಂ ಸಿಂಗ್ ಯಾದವ್ ಅವರೇ ಧನ್ಯವಾದಗಳು, ಇಂದು ನೀವು ದೇಶದ 125 ಕೋಟಿ ಭಾರತೀಯರ ಹಾರೈಕೆಯನ್ನು ಪುನರುಚ್ಛರಿಸಿದಿರಿ ಎಂದು ಹೇಳುವ ಪೋಸ್ಟರ್ ಗಳು ಲಕ್ನೊ ನಗರದ ಅಲ್ಲಲ್ಲಿ ರಾರಾಜಿಸುತ್ತಿವೆ.

ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡುವ ಆಸೆಯಿದೆ ಎಂದು ನಿನ್ನೆ ಲೋಕಸಭೆಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಹೇಳುವ ಮೂಲಕ ವಿರೋಧ ಪಕ್ಷಗಳ ನಾಯಕರಿಗೆ ಅಚ್ಚರಿ ಮತ್ತು ಆಘಾತವನ್ನುಂಟುಮಾಡಿದ್ದರು. ಈ ಸಂದರ್ಭದಲ್ಲಿ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಮುಲಾಯಂ ಸಿಂಗ್ ಯಾದವ್ ಪಕ್ಕದಲ್ಲಿಯೇ ಕುಳಿತಿದ್ದರು.

ಬಿಜೆಪಿಗೆ ಸಮನಾಗಿ ವಿರೋಧ ಪಕ್ಷಗಳು ಮಾಡುತ್ತಿರುವ ಮಹಾಘಟಬಂಧನ ಎಂಬ ಮಹಾಮೈತ್ರಿಗೆ ಅವರ ಪುತ್ರ ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಬೆಂಬಲ ಸೂಚಿಸಿರುವ ಸಂದರ್ಭದಲ್ಲಿ  ಯಾದವ್ ಅವರ ಈ ಮಾತುಗಳು ಅಚ್ಚರಿಯನ್ನುಂಟುಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com