ಪಾಪಿಸ್ತಾನಕ್ಕೆ ಉಗ್ರ ಶಾಕ್: ಪಾಕ್ ನಿಂದ ಆಮದಾಗುವ ಎಲ್ಲಾ ವಸ್ತುಗಳ ಸುಂಕ ಶೇ. 200ರಷ್ಟು ಏರಿಕೆ

ಪುಲ್ವಾಮ ಉಗ್ರ ದಾಳಿಯ ನಂತರ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನದಿಂದ ಆಮದು ಆಗುವ ಎಲ್ಲಾ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಪುಲ್ವಾಮ ಉಗ್ರ ದಾಳಿಯ ನಂತರ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನದಿಂದ ಆಮದು ಆಗುವ ಎಲ್ಲಾ​ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.200 ರಷ್ಟು ಹೆಚ್ಚಳ ಮಾಡಿದೆ. 
ನಿನ್ನೆಯಷ್ಟೇ ಪಾಕಿಸ್ತಾನಕ್ಕೆ ನೀಡಲಾಗಿದ್ದ ಆಪ್ತ ರಾಷ್ಟ್ರ ಸ್ಥಾನಮಾನನ್ನು ಹಿಂಪಡೆದಿದ್ದ ಭಾರತ ಇಂದು ಪಾಕ್​ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.200 ಹೆಚ್ಚಳ ಮಾಡಿದೆ. 
ಪಾಕಿಸ್ತಾನಕ್ಕೆ ನೀಡಿದ್ದ ಆಪ್ತ ರಾಷ್ಟ್ರದ ಸ್ಥಾನಮಾನ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪಾಕ್​ನಿಂದ ಭಾರತಕ್ಕೆ ರಫ್ತು ಮಾಡುವ ಉತ್ಪನ್ನಗಳ ಮೇಲಿನ ಮೂಲ ಸೀಮಾ ಸುಂಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ.200 ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರು ಟ್ವೀಟ್​ ಮಾಡಿದ್ದಾರೆ.
2017-18ನೇ ಸಾಲಿನಲ್ಲಿ ಪಾಕ್​ನಿಂದ ಭಾರತಕ್ಕೆ ಒಟ್ಟು 3,482.3 ಕೋಟಿ ರೂ. ಮೌಲ್ಯದ ಉತ್ಪನ್ನಗಳು ಭಾರತಕ್ಕೆ ಆಮದಾಗಿದ್ದವು. ತಾಜಾ ಹಣ್ಣುಗಳು, ಸಿಮೆಂಟ್​, ಪೆಟ್ರೋಲಿಯಂ ಉತ್ಪನ್ನಗಳು, ಖನಿಜ ಮತ್ತು ಅದಿರು ಮತ್ತು ಚರ್ಮದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೀಗ ಈ ಉತ್ಪನ್ನಗಳ ಮೇಲಿನ ಆಮದು ಸುಂಕ ಶೇ.200 ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾಕ್​ನಿಂದ ಭಾರತಕ್ಕೆ ರಫ್ತಾಗುವ ಉತ್ಪನ್ನಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದು ನಿಶ್ಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com