ಭಾರತದ ಸ್ವಯಂ ರಕ್ಷಣೆ ಹಕ್ಕಿಗೆ ಅಮೆರಿಕಾ ಬೆಂಬಲ: ಉಗ್ರರ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವ ಘೋಷಣೆ

ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತದ ಸ್ವಯಂ ರಕ್ಷಣೆ ಹಕ್ಕಿಗೆ ಅಮೆರಿಕಾ ಬೆಂಬಲ ವ್ಯಕ್ತಪಡಿಸಿದೆ.ಉಗ್ರ ವಿರುದ್ಧ ಜಂಟಿ ಕಾರ್ಯಾಚರಣೆಗೆ ಕೈಜೋಡಿಸುವುದಾಗಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೊಲ್ಟಾನ್
ಅಜಿತ್ ದೋವಾಲ್
ಅಜಿತ್ ದೋವಾಲ್
ನವದೆಹಲಿ: ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತದ ಸ್ವಯಂ ರಕ್ಷಣೆ ಹಕ್ಕಿಗೆ ಅಮೆರಿಕಾ ಬೆಂಬಲ ವ್ಯಕ್ತಪಡಿಸಿದೆ.
ಪಾಕಿಸ್ತಾನ ಮೂಲ ನೆಲೆಯಾಗಿರುವ  ಜೈಸ್ - ಇ- ಮೊಹಮ್ಮದ್ ಸೇರಿದಂತೆ ಇನ್ನಿತರ ಉಗ್ರರ ಸಂಘಟನೆಗಳ ವಿರುದ್ಧ ಜಂಟಿ ಕಾರ್ಯಾಚರಣೆಗೆ ಕೈಜೋಡಿಸುವುದಾಗಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೊಲ್ಟಾನ್, ಭಾರತ  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರಿಗೆ  ಹೇಳಿದ್ದಾರೆ.
ಉಗ್ರರ ಚಟುವಟಿಕೆಗಳಿಗೆ ಪಾಕಿಸ್ತಾನ ಮೂಲ ನೆಲೆಯಾಗುತ್ತಿರುವ ವಿರುದ್ಧ ಹೋರಾಟ ನಡೆಸಲಾಗುವುದು ಈ ಸಂಬಂಧ ಮಾತುಕತೆಯನ್ನು ಮುಂದುವರೆಸಲಾಗುವುದು ಎಂದು ಬೋಲ್ಟಾನ್ ತಿಳಿಸಿದ್ದಾರೆ. 
ಈ ಹಿಂದೆ ಶ್ವೇತ ಭವನ ಹಾಗೂ ಸೆಕ್ರೆಟರಿ ಅಪ್ ಸ್ಟೇಟ್ ಮೈಕ್ ಪೊಂಪೆಯೊ  ಕೂಡಾ ಉಗ್ರ ಚಟುವಟಿಕೆಗಳಿಗೆ ನೀಡುತ್ತಿರುವ ಬೆಂಬಲ ರದ್ದುಗೊಳಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com