ಮಹಾರಾಷ್ಟ್ರ: ಅತಿಯಾದ ಮೊಬೈಲ್ ಬಳಕೆ; ಕೆಂಡಾಮಂಡಲಗೊಂಡು ಪುತ್ರಿಗೆ ಬೆಂಕಿ ಹಚ್ಚಿದ ತಂದೆ, ಬಂಧನ

ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಮಗಳ ಮೇಲೆ ಕೆಂಡಾಮಂಡಲಗೊಂಡ ತಂದೆಯೊಬ್ಬ ಸೀಮೆಎಣ್ಣೆ ಸುರಿದು ಪುತ್ರಿಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪಲ್ಘರ್: ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಮಗಳ ಮೇಲೆ ಕೆಂಡಾಮಂಡಲಗೊಂಡ ತಂದೆಯೊಬ್ಬ ಸೀಮೆಎಣ್ಣೆ ಸುರಿದು ಪುತ್ರಿಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. 
ಮೊಹಮ್ಮದ್ ಮನ್ಸೂರಿ ಯುವತಿಗೆ ಬೆಂಕಿ ಹಚ್ಚಿದ ತಂದೆಯಾಗಿದ್ದಾನೆ. ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ತಂದೆ ಮಗಳ ನಡುವೆ ಮೊಬೈಲ್ ಬಳಕೆ ಕುರಿತಂತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೆಂಡಾಮಂಡಲಗೊಂಡಿರುವ ಮನ್ಸೂರಿ ಮಗಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. 
ಯುವತಿಯ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಆಕೆಯನ್ನು ಜೆಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯುವತಿ ದೇಹ ಶೇ.70 ರಷ್ಟು ಸುಟ್ಟು ಹೋಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. 
ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನ್ಸೂರಿ ವಿರುದ್ಧ ಸೆಕ್ಷನ್ 307 (ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಬಂಧನಕ್ಕೊಳಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com