ಮುಂಬೈ: ನಾಲ್ಕನೇ ಮಹಡಿಯಿಂದ ಬಿದ್ದ ಮಗು ಮರದ ಕೊಂಬೆಗೆ ಸಿಲುಕಿ ಅದೃಷ್ಟವಶಾತ್ ಪಾರು

ಸಿನಿಮಾದಲ್ಲಿನ ದೃಶ್ಯದಂತೆ 14 ತಿಂಗಳ ಮಗು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದರೂ ....
ಪೋಷಕರೊಂದಿಗೆ ಮಗು
ಪೋಷಕರೊಂದಿಗೆ ಮಗು
Updated on

ಮುಂಬೈ: ಸಿನಿಮಾದಲ್ಲಿನ ದೃಶ್ಯದಂತೆ 14 ತಿಂಗಳ ಮಗು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದರೂ ಪವಾಡಸದೃಶ್ಯವಾಗಿ ಬದುಕುಳಿದ ಘಟನೆ ಮುಂಬೈಯ ಗೋವಂದಿ ಎಂಬಲ್ಲಿ ನಡೆದಿದೆ.

ಮಗು ಬೀಳುವಾಗ ಮರವೊಂದು ಅಡ್ಡಬಂದಿದ್ದರಿಂದ ಅಪಾಯದಿಂದ ಪಾರಾಗಿದೆ. ಮುಂಬೈಯ ಗೋವಂದಿ ಪೂರ್ವದ ಅಪಾರ್ಟ್ ಮೆಂಟ್ ವೊಂದರಲ್ಲಿ ಅಥರ್ವ ಬರ್ಕಡೆ ಎಂಬ ಮಗು ತನ್ನ ಮನೆಯ ಹೊರಗೆ ಬಾಲ್ಕನಿಯಲ್ಲಿ ಆಟವಾಡುತ್ತಿತ್ತು. ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿತು. ಆಗ ಮರದ ಕೊಂಬೆಯಲ್ಲಿ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡ ಕಾರಣ ಬದುಕುಳಿದಿದೆ.
ಅಥರ್ವ ಬಿದ್ದಿದ್ದನ್ನು ಕೂಡಲೇ ಕಂಡಿದ್ದ ಆತನ ಅಜ್ಜಿ ಪೋಷಕರಿಗೆ ತಿಳಿಸಿದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದ ಕಾರಣ ಮಗು ಬದುಕುಳಿದಿದೆ.

ಮಗು ಸದ್ಯ ಫೋರ್ಟಿಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಮಗುವಿನ ಹೊಟ್ಟೆಗೆ ಸ್ವಲ್ಪ ಗಾಯವಾಗಿದ್ದು ತೀವ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಅತರ್ವನ ಪೋಷಕರು ಭದ್ರತೆಯ ಗ್ರಿಲ್ ನ್ನು ಬಾಲ್ಕನಿಗೆ ಅಳವಡಿಸಿದ್ದರೆ ಅವಘಡವನ್ನು ತಪ್ಪಿಸಬಹುದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com