ನಿಯಾಜ್  ಚಿತಾರಾ
ನಿಯಾಜ್ ಚಿತಾರಾ

20 ಮಂದಿ ಭೂರಹಿತರಿಗೆ ತನ್ನ ಆಸ್ತಿಯನ್ನೇ ದಾನ ಮಾಡಿದ ಕೇರಳ ಯುವ ಕಾಂಗ್ರೆಸ್ ಮುಖಂಡ!

ದೇಶದಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ, ಮತ್ತೊಂದೆಡೆ ಜನರು ತುಂಡು ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ, ..
ತಿರುವನಂತಪುರ: ದೇಶದಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ, ಮತ್ತೊಂದೆಡೆ ಜನರು ತುಂಡು ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ, ಆದರೆ ಕೇರಳದ ಯುವ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಪಿತ್ರಾರ್ಜಿತ ಆಸ್ತಿಯಾದ 1 ಎಕರೆ 10 ಸೆಂಟ್ ಭೂಮಿಯನ್ನು ಭೂ ರಹಿತರಿಗೆ ದಾನವಾಗಿ ನೀಡಿದ್ದಾರೆ.
ಯುತ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ನಿಯಾಜ್ ಚಿತಾರ 20 ಫಲಾನುಭವಿಗಳಿಗೆ 4 ಸೆಂಟ್ಸ್ ಭೂಮಿಯನ್ನು ನೋಂದಣಿ ಮಾಡಿಕೊಟ್ಟಿದ್ದಾರೆ.
ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲ ಜನವರಿ ಮೂರನೇ ವಾರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ,. ಫಲಾನುಭವಿಗಳಿಗೆ ಕೆಪಿಸಿಸಿ ಅಧ್ಯಕ್ಷ ಮುಳ್ಳಪ್ಪಳ್ಳಿ  ರಾಮಚಂದ್ರನ್ ಮೊದಲ ಹಂತದ ಹಣಕಾಸು ನೆರವು ನೀಡಲಿದ್ದಾರೆ,  ಗಾಂಧಿಗ್ರಾಮ ಯೋಜನೆಯಡಿ ಇವರಿಗೆ ಮನೆ ನಿರ್ಮಿಸಿಕೊಡಸಲು ತೀರ್ಮಾನಿಸಲಾಗಿದೆ.
ನಿಯಾಜ್ ಚಿತಾರ ಮುದುಕಲ್ ಗ್ರಾಮ ಪಂಚಾಯಿತಿಗೆ ತೆರಳಿದ್ದ ವೇಳೆ ಮಹಿಳೆಯೊಬ್ಬರು4 ವರ್ಷದ ವಿಕಲಾಂಗ ಮಗುವಿನ ಜೊತೆ ಪಂಚಾಯಿತಿ ಅದಿಕಾರಿಕಾಗಿ ಕಾಯುತ್ತಾ ಕುಳಿತಿದ್ದರು, ಭೂ ರಹಿತರಿಗೆ ಸರ್ಕಾರದಿಂದ ಯಾವುದಾದರೂ ಯೋಜನೆಯಡಿ ಭೂಮಿ ಸಿಗುವುದೇ ಎಂದು ವಿಚಾರಣೆ ನಡೆಸಲು ಮಹಿಳೆ ಕಾಯುತ್ತಿದ್ದರು. 
ಕಡು ಬಡತನದಲ್ಲಿದ್ದ ಮಹಿಳೆ  ಸರ್ಕಾರದಿಂದ ಯಾವುದಾದರೂ ಭೂಮಿ ಸಿಗಬಹುದೇನು ಎಂದು ಆಗಾಗ್ಗೆ ಬಂದು ವಿಚಾರಿಸಲು ಆಗಾಗ್ಗೆ ಬರುತ್ತಿದ್ದರು. 
ಅವಶ್ಯಕತೆ ಉಳ್ಳವರಿಗೆ ತನ್ನ ಎಲ್ಲಾ ಭೂಮಿಯನ್ನು ದಾನ ಮಾಡಬೇಕೆಂದು ಮನಸ್ಸು ಬಯಸುತ್ತಿತ್ತು,ಈ ವೇಳೆ ವಿಕಲಾಂಗ ಮಗುವಿಗೆ 4 ಸೆಂಟ್ ಭೂಮಿಯನ್ನು ನಿಯಾಜ್ ನೋಂದಣಿ ಮಾಡಿದ್ದಾರೆ, ಅದನ್ನು ಬೇರೆ ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ,ಜೊತೆಗೆ ಮನೆ ಕಟ್ಟಲು ಹಣದ ವ್ಯವಸ್ಥೆ ಕೂಡ ಮಾಡಿದ್ದಾರೆ.
ಮನೆಯಿಲ್ಲದ ಸುಮಾರು ಸಾವಿರಾರು ಮಂದಿ ಇದ್ದಾರೆ, ನಾನು ಚಿತಾರ ಮತ್ತು ಮಂಗೋಡ್ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ, ಅವಶ್ಯಕತೆ ಇರುವವರ ಪಟ್ಟಿ ಪಡೆದು, ಅವರ ಜೊತೆ ಮಾತನಾಡಿ ಅ ನಂತರ 20 ಫಲಾನುಭವಿಗಳನ್ನು ಆಯ್ಕೆ ಮಾಡಿದೆ.
ಅದರಲ್ಲಿ ವಿಧವೆಯರು. ದೈಹಿಕ ವಿಕಲಾಂಗರು, ಹಾಗೂ ರೋಗಗಳಿಂದ ನರಳುತ್ತಿರುವ ಅರ್ಹರನ್ನು ನಾನು ಆಯ್ಕ ಮಾಡಿದೆ, ಯಾವುದೇ ಶಿಪಾರಸ್ಸಿಗೊಳಗಾಗದೇ ನಾನೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಹೇಳಿದ್ದಾರೆ,
ಸಕ್ರಿಯ ರಾಜಕೀಯದಿಂದ ಬ್ರೇಕ್ ತೆಗೆದುಕೊಂಡು ಸದ್ಯ ವಕೀಲ ವೃತ್ತಿ ಮುಂದುವರೆಸುತ್ತಿರುವ ನಿಯಾಜ್ ಗಾಂಧಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ, 2 ವರ್ಷದಲ್ಲಿ ಗಾಂದಿ ಗ್ರಾಮ ಕೆಲಸ ಪೂರ್ಣಗೊಳ್ಳಲಿದ್ದು, ಅಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ

Related Stories

No stories found.

Advertisement

X
Kannada Prabha
www.kannadaprabha.com