ಆಪರೇಷನ್ ಥಿಯೇಟರ್ ನಲ್ಲಿ ನರ್ಸ್ ಗೆ ಕಿಸ್ ನೀಡಿದ ಸರ್ಜನ್: ವಿಡಿಯೋ ವೈರಲ್; ಸರ್ಜನ್ ವಜಾ

ಜಿಲ್ಲಾ ಆಸ್ಪತ್ರೆಯ ಸಿವಿಲ್‌ ಸರ್ಜನ್‌ ಆಪರೇಶನ್‌ ಥಿಯೇಟರ್‌ನಲ್ಲಿ ನರ್ಸ್‌ ಗೆ ಕಿಸ್‌ ನೀಡಿದ ಘಟನೆಯ ವಿಡಿಯೋ ಚಿತ್ರಿಕೆ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮಧ್ಯಪ್ರದೇಶ:  ಜಿಲ್ಲಾ ಆಸ್ಪತ್ರೆಯ ಸಿವಿಲ್‌ ಸರ್ಜನ್‌ ಆಪರೇಶನ್‌ ಥಿಯೇಟರ್‌ನಲ್ಲಿ  ನರ್ಸ್‌ ಗೆ ಕಿಸ್‌ ನೀಡಿದ ಘಟನೆಯ ವಿಡಿಯೋ ಚಿತ್ರಿಕೆ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 
ಸರ್ಜನ್ ನನ್ನು  ಹುದ್ದೆಯಿಂದ ಕಿತ್ತು  ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಾಂಕ್‌ ಮಿಶ್ರಾ  ಹೇಳಿದ್ದಾರೆ. ಬೇಜವಾಬ್ದಾರಿಯ ವರ್ತನೆ ತೋರಿರುವ 49ರ ಹರೆಯದ ಸಿವಿಲ್‌ ಸರ್ಜನ್‌ ನನ್ನು ಹುದ್ದೆಯಿಂದ ಕಿತ್ತು ಹಾಕಲಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಪ್ರಕರಣದ ಬಗ್ಗೆ  ವಿವರಣೆ ನೀಡುವಂತೆ ಸರ್ಜನ್ ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 
ಘಟನೆಯನ್ನು ಅನುಸರಿಸಿ ಕಳೆದ ಎರಡು ದಿನಗಳಿಂದ ರಜೆಯಲ್ಲಿರುವ ಸಿವಿಲ್‌ ಸರ್ಜನ್‌, ನೊಟೀಸಿಗೆ ಕೊಡುವ ಉತ್ತರದ ಆಧಾರದ ಮೇಲೆ ಆತನ ವಿರುದ್ಧದ ಮುಂದಿನ ಕ್ರಮ ನಿರ್ಧಾರವಾಗಲಿದೆ ಎಂದು ಜಿಲ್ಲಾಧಿಕಾರಿ ಮಿಶ್ರಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com