ಬಿಜೆಪಿ ಆಣತಿಯಂತೆ ಜೆಎನ್ ಯು ದೇಶದ್ರೋಹ ಆರೋಪದ ಚಾರ್ಜ್ ಶೀಟ್: ಮೆಹಬೂಬಾ ಮುಫ್ತಿ

ಜೆಎನ್ ಯು ದೇಶದ್ರೋಹ ಪ್ರಕರಣದಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿರುವ ಆರೋಪಿಗಳ ಪರವಾಗಿ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆಣತಿಯಂತೆ ಜೆಎನ್ ಯು ದೇಶದ್ರೋಹ ಆರೋಪದ ಚಾರ್ಜ್ ಶೀಟ್: ಮೆಹಬೂಬಾ ಮುಫ್ತಿ
ಬಿಜೆಪಿ ಆಣತಿಯಂತೆ ಜೆಎನ್ ಯು ದೇಶದ್ರೋಹ ಆರೋಪದ ಚಾರ್ಜ್ ಶೀಟ್: ಮೆಹಬೂಬಾ ಮುಫ್ತಿ
Updated on
ನವದೆಹಲಿ: ಜೆಎನ್ ಯು ದೇಶದ್ರೋಹ ಪ್ರಕರಣದಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿರುವ ಆರೋಪಿಗಳ ಪರವಾಗಿ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಪ್ರಕರಣದಲ್ಲಿ ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ಬಿಜೆಪಿ ಆಣತಿಯಂತೆ ಚಾರ್ಜ್ ಶೀಟ್ ದಾಖಲಿಸಲಾಗಿದೆ. 7 ಕಾಶ್ಮೀರಿ ವಿದ್ಯಾರ್ಥಿಗಳನ್ನು  ಸಿಲುಕಿಸಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.  ಚಾರ್ಜ್ ಶೀಟ್ ಹಾಕಿರುವುದರಲ್ಲಿ ಅಚ್ಚರಿಯೇನು ಇಲ್ಲ 2019 ರ ಚುನಾವಣೆ ಇದೆ. ಈ ಹಂತದಲ್ಲಿ ಕಾಶ್ಮೀರಿಗಳನ್ನು ಚುನಾವಣಾ ಲಾಭ ಪಡೆಯಲು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಫ್ಜಲ್ ಗುರುವನ್ನು  ಗಲ್ಲಿಗೇರಿಸಿತ್ತು, ಅದರ ಪರಿಣಾಮವನ್ನು ಕಾಶ್ಮೀರ ಇಂದಿಗೂ ಎದುರಿಸುತ್ತಿದೆ. ರಾಷ್ಟ್ರೀಯ ಪಕ್ಷಗಳ ಚುನಾವಣಾ ಲಾಭಕ್ಕಾಗಿ ಕಾಶ್ಮೀರಿಗಳು ಇನ್ನೆಷ್ಟು ಬೆಲೆ ತೆರಬೇಕು ಎಂದು ಮುಫ್ತಿ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com