ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತೀಯ ಕ್ರೀಡಾ ಪ್ರಾಧಿಕಾರ ಕಚೇರಿ ಮೇಲೆ ಸಿಬಿಐ ದಾಳಿ, ನಿರ್ದೇಶಕರೂ ಸೇರಿ 4 ಮಂದಿ ಬಂಧನ

ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದ ಕಚೇರಿಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದಾಳಿ ನಡೆಸಿದ್ದು, ಸಾಯಿ ನಿರ್ದೇಶಕರೂ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ನವದೆಹಲಿ: ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದ ಕಚೇರಿಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದಾಳಿ ನಡೆಸಿದ್ದು, ಸಾಯಿ ನಿರ್ದೇಶಕರೂ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಭಾರತೀಯ ಕ್ರೀಡಾ ಪ್ರಾಧಿಕಾರದ ಕೆಲವು ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿತ್ತು. ಯಾವುದೇ ಕೆಲಸಗಳಿಗೆ ಅನುಮತಿ ನೀಡಲು ಕೆಲವು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿರುವುದಾಗಿ ಸಿಬಿಐನಲ್ಲಿ ಹಲವು ದೂರುಗಳು ದಾಖಲಾಗಿತ್ತು. ಅಲ್ಲದೆ ಸ್ವತಃ ಪ್ರಾಧಿಕಾರವು ಈ ದೂರಿನ ಸಂಬಂಧ ತನಿಖೆ ನಡೆಸಲು ಸಿಬಿಐಗೆ ಮನವಿ ಮಾಡಿತ್ತು. 
ಈ ಹಿನ್ನಲೆಯಲ್ಲಿ ಇಂದು ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿರುವ ಕ್ರೀಡಾ ಪ್ರಾಧಿಕಾರದ ವಿವಿಧ ಕಚೇರಿಗಳ ಮೇಲೆ ದಾಳಿ ಮಾಡಿ ಹಲವು ಮಹತ್ವದ ಕಡತಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಕ್ರೀಡಾ ಪ್ರಾಧಿಕಾರದ ನಿರ್ದೇಶಕರಾದ ಎಸ್ ಕೆ ಶರ್ಮಾ, ಕಿರಿಯ ಅಕೌಂಟ್ಸ್ ಅಧಿಕಾರಿ ಹರಿಂದರ್ ಪ್ರಸಾದ್, ಸೂಪರ್ ವೈಸರ್ ಲಲಿತ್ ಜೋಲಿ, ಯುಡಿಸಿ ವಿಕೆ ಶರ್ಮಾ ಮತ್ತು ಖಾಸಗಿ ವ್ಯಕ್ತಿಗಳಾದ ಮಂದೀಪ್ ಅಹುಜಾ, ಅವರ ಸಹಾಯಕ ಯೂನುಸ್ ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಿಬಿಐ ಮೂಲಗಳ ಪ್ರಕಾರ ಭಾರತೀಯ ಕ್ರೀಡಾ ಪ್ರಾಧಿಕಾರದ ಬಳಿ ಬಾಕಿ ಇರುವ ಸುಮಾರು 19 ಲಕ್ಷ ರೂ ಮೌಲ್ಯ ಬಿಲ್ ಕ್ಲಿಯರ್ ಮಾಡಲು ಅಧಿಕಾರಿಗಳು ಶೇ. 3ರಷ್ಟು ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com