ಸೇನಾ ಆಹಾರದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಪುತ್ರ ನಿಧನ

2017 ರಲ್ಲಿ ಸೇನಾ ಆಹಾರದ ಗುಣಮಟ್ಟದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಅವರ ಪುತ್ರ ರೋಹಿತ್ ನಿಧನರಾಗಿದ್ದಾರೆ.
ಸೇನಾ ಆಹಾರದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಪುತ್ರ ನಿಧನ
ಸೇನಾ ಆಹಾರದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಪುತ್ರ ನಿಧನ
Updated on
ರೆವಾರಿ: 2017 ರಲ್ಲಿ ಸೇನಾ ಆಹಾರದ ಗುಣಮಟ್ಟದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಅವರ ಪುತ್ರ ರೋಹಿತ್ ನಿಧನರಾಗಿದ್ದಾರೆ. 
ಹರ್ಯಾಣದ ರೆವಾರಿಯಲ್ಲಿ ರೋಹಿತ್ ಶವ ಪತ್ತೆಯಾಗಿದೆ. ರೋಹಿತ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಮಗೆ ಕರೆ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಹೋದ ನಮಗೆ ರೂಮ್ ಗೆ ಬೀಗ ಹಾಕಿರುವುದು ಕಂಡಿಬಂದಿತು. ಪಿಸ್ತೂಲ್ ಮೂಲಕ ಗುಂಡು ಹಾರಿಸಿಕೊಂಡು ಯೋಧನ ಪುತ್ರ ಮೃತಪಟ್ಟಿದ್ದಾನೆ.
ರೋಹಿತ್ ತಂದೆ ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್ ರಾಜ್ ಗೆ ತೆರಳಿದ್ದರು. ಅವರ ತಂದೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 2017 ರಲ್ಲಿ ಸೇನಾ ಆಹಾರದ ಗುಣಮಟ್ಟದ ಬಗ್ಗೆ ಯೋಧ ತೇಜ್ ಬಹದ್ದೂರ್ ವಿಡಿಯೋ ಮೂಲಕ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com