ಉದ್ಯಮಕ್ಕೆ ಭಾರತ ದೇಶ ಹಿಂದೆಂದಿಗಿಂತಲೂ ಇಂದು ಪ್ರಶಸ್ತವಾಗಿದೆ; ಪ್ರಧಾನಿ ಮೋದಿ

ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಭಾರತ ಉದ್ಯಮ ಮತ್ತು ವಹಿವಾಟುಗಳಿಗೆ ಪ್ರಶಸ್ತವಾಗಿದೆ ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಗಾಂಧಿನಗರ(ಗುಜರಾತ್): ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಭಾರತ ಉದ್ಯಮ ಮತ್ತು ವಹಿವಾಟುಗಳಿಗೆ ಪ್ರಶಸ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್ ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ಮಾತನಾಡಿ, ತಮ್ಮ ಸರ್ಕಾರ ಹೂಡಿಕೆಯ ಆಕರ್ಷಣೆಗೆ ತೆಗೆದುಕೊಂಡಿರುವ ಕೆಲವು ಕ್ರಮಗಳು ಮತ್ತು ಉದ್ಯಮ ಸುಗಮವಾಗಿ ನಡೆಸುವಂತಹ ವಾತಾವರಣ ಸೃಷ್ಟಿ ಮಾಡಿದೆ ಎಂದರು.

ವಿಶ್ವ ಬ್ಯಾಂಕಿನ ಉದ್ಯಮ ಸುಗಮ ವರದಿಯಲ್ಲಿ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ 65ನೇ ಸ್ಥಾನಕ್ಕೆ ಏರಿಕೆಯಾಗಿದ್ದು ಉದ್ಯಮ ವಲಯದಲ್ಲಿ ಹೂಡಿಕೆಗೆ ಪ್ರಶಸ್ತ ದೇಶ ಎನಿಸಿಕೊಂಡಿದೆ. ಶ್ರಮಪಟ್ಟು ಕೆಲಸ ಮಾಡಿದರೆ ಮುಂದಿನ 50 ವರ್ಷಗಳಲ್ಲಿ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಇನ್ನಷ್ಟು ಮುಂದೆ ಸಾಗಬಹುದು ಎಂದು ತಮ್ಮ ತಂಡಕ್ಕೆ ಹೇಳಿರುವುದಾಗಿ ಮೋದಿ ಹೇಳಿದರು.
ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತಹ ಅನೇಕ ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿವೆ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಲು ಮತ್ತು ಸಾಧಿಸುವುದಕ್ಕೆ ಇರುವ ಅಡೆತಡೆಗಳನ್ನು ತೊಡೆದು ಹಾಕುವಲ್ಲಿ ನಾವು ಗಮನ ಹರಿಸುತ್ತಿದ್ದೇವೆ ಎಂದರು.

ಭಾರತಕ್ಕೆ ಪದೇ ಪದೇ ಭೇಟಿ ನೀಡುವವರು ಇಲ್ಲಿನ ಬದಲಾವಣೆಯನ್ನು ಗಮನಿಸಬಹುದು. ನಿರ್ದೇಶನ ಮತ್ತು ತೀವ್ರತೆ ಎರಡರಲ್ಲೂ ಬದಲಾವಣೆಯಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ಗಾತ್ರವನ್ನು ಕಡಿಮೆ ಮಾಡಿ ಆಡಳಿತವನ್ನು ಹೆಚ್ಚಿಸಲು ತಮ್ಮ ಸರ್ಕಾರ ಗಮನ ಹರಿಸಿತ್ತು ಎಂದರು.

ಸರಕು ಮತ್ತು ಸೇವಾ ತೆರಿಗೆ ಜಾರಿ, ತೆರಿಗೆ ವಿಧಾನ ಸರಳಗೊಳಿಸಿದ್ದು ವಹಿವಾಟುಗಳ ವೆಚ್ಚವನ್ನು ಕಡಿಮೆ ಮಾಡಿ ಪ್ರಕ್ರಿಯೆಗಳನ್ನು ಹೆಚ್ಚು ದಕ್ಷವನ್ನಾಗಿಸಿವೆ. ಉದ್ಯಮ, ವಹಿವಾಟುಗಳ ವಿಧಾನ ಸರಳವಾಗಿದೆ ಎಂದು ಸಮರ್ಥಿಸಿಕೊಂಡರು.
2003ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರೇ ವೈಬ್ರೆಂಟ್ ಗುಜರಾತ್ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com