ಯೋಗಿ ಸರ್ಕಾರಕ್ಕೆ ಅಕ್ಷಯಪಾತ್ರೆಯಾದ 'ಕುಂಭಮೇಳ': ಉತ್ತರ ಪ್ರದೇಶಕ್ಕೆ 1.2 ಲಕ್ಷ ಕೋಟಿ ಆದಾಯ!

ಭಾರತದ ಬಹುದೊಡ್ಡ ಧಾರ್ಮಿಕ ಮೇಳ ಎಂಬ ಪ್ರಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಕುಂಭಮೇಳದಿಂದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಲಕ್ಷ ಕೋಟಿ ರೂ. ಆದಾಯ ಹರಿದು ಬಂದಿದೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ರಯಾಗ್ ರಾಜ್: ಭಾರತದ ಬಹುದೊಡ್ಡ ಧಾರ್ಮಿಕ ಮೇಳ ಎಂಬ ಪ್ರಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಕುಂಭಮೇಳದಿಂದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಲಕ್ಷ ಕೋಟಿ ರೂ. ಆದಾಯ  ಹರಿದು ಬಂದಿದೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟ ತಿಳಿಸಿದೆ.
ಜನವರಿ 15ರಂದು ಆರಂಭವಾಗಿರುವ ಮಹಾ ಕುಂಭ ಮೇಳ ಮಾರ್ಚ್ 4 ರ ವರೆಗೆ ನಡೆಯಲಿದ್ದು, 12  ವರ್ಷಗಳಿಗೆ ಒಮ್ಮೆ ಮಾತ್ರ ನಡೆಯುವ ಈ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಸರ್ಕಾರ ಭಾರಿ ಖರ್ಚು ಮಾಡಿ ಅದ್ದೂರಿಯಾಗಿಯೇ ಆಯೋಜನೆ ಮಾಡಿದೆ. ಅಂತೆಯೇ ಯೋಗಿ ಸರ್ಕಾರದ ಪಾಲಿಗೆ ಕುಂಭಮೇಳ ಅಕ್ಷಯಪಾತ್ರೆಯಾಗಿ ಬದಲಾಗಿದ್ದು, ನಿರೀಕ್ಷೆಗೂ ಮೀರಿದ ಆದಾಯ ಹರಿದು ಬರುತ್ತಿದೆ. 
ಮೂಲಗಳ ಪ್ರಕಾರ 50 ದಿನಗಳ ಈ ಬೃಹತ್ ಕುಂಭಮೇಳಕ್ಕೆ ಉತ್ತರ ಪ್ರದೇಶ ಸರ್ಕಾರ ಸುಮಾರು 4200 ಕೋಟಿ ಖರ್ಚು ಮಾಡಿದೆ. ಜನವರಿ 15ರಂದು ಆರಂಭವಾದ ಮಹಾಕುಂಭಮೇಳ ಮಾರ್ಚ್​ 4ರವರೆಗೆ ನಡೆಯಲಿದ್ದು, ಈ ಏಳು ದಿನಗಳ ಅವಧಿಯಲ್ಲಿ ₹ 1.20 ಲಕ್ಷ ಕೋಟಿ ಆದಾಯ ಬಂದಿದೆ. ಈ ಬಗ್ಗೆ ಭಾರತೀಯ ಉದ್ಯಮಗಳ ಒಕ್ಕೂಟ ಮಾಹಿತಿ ನೀಡಿದ್ದು, 50 ದಿನಗಳ ಕಾಲ ನಡೆಯುವ ಅದ್ದೂರಿ ಕುಂಭ ಮೇಳಕ್ಕೆ ಯೋಗಿ ಸರ್ಕಾರ ಸುಮಾರು ₹ 4,200 ಕೋಟಿ ಖರ್ಚು ಮಾಡಿದ್ದರಿಂದ ಸುಮಾರು 6 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಿವೆ ಎಂದು ತನ್ನ ವರದಿಯಲ್ಲಿ ಹೇಳಿದೆ.
ಇದಲ್ಲದೆ ಅಸಂಘಟಿತ ವಲಯಗಳಾದ ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿಗಳು, ವಾಹನ ಚಾಲಕರು, ದೋಣಿ ನಡೆಸುವವರು, ಸ್ವಯಂ ಸೇವಕರು ಸೇರಿ ಸುಮಾರು 55 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ.
ಕಳೆದ ಬಾರಿ 1,600 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದ ಕುಂಭಮೇಳ ಈ ವರ್ಷ 3,200 ಹೆಕ್ಟೇರ್ ಗೆ ತಲುಪಿದೆ. ಮೇಳದ ಸುತ್ತಲಿನ ಪ್ರದೇಶದಲ್ಲಿ 250 ಕಿ.ಮೀ ಉದ್ದದ ರಸ್ತೆ ಹಾಗೂ 22 ಪಾಂಟೂನ್ ಸೇತುವೆಗಳನ್ನು (ನೀರಿನ ಮೇಲೆ ತೇಲುವ ಸೇತುವೆ) ನಿರ್ಮಿಸಿದ್ದು, ಬೃಹತ್ ತಾತ್ಕಾಲಿಕ ನಗರವೇ ನಿರ್ಮಾಣ ಮಾಡಿದಂತಿದೆ. ಈ ಮಿನಿ ನಗರದಲ್ಲಿ 4,000 ಟೆಂಟ್​, 40 ಸಾವಿರ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಮೇಳಕ್ಕೆ ಬರುವ ಯಾತ್ರಿಗಳ ಅನುಕೂಲಕ್ಕಾಗಿ ನೂರಾರು ವಿಶೇಷ ರೈಲುಗಳು ಸಂಚಾರಿಸುತ್ತಿವೆ. ಇದರಿಂದಲೂ ರೈಲ್ವೇ ಇಲಾಖೆಗೆ ಸಾಕಷ್ಟು ಆದಾಯ ಬರುತ್ತಿದೆ.ಜೊತೆಗೆ ಅಲಹಬಾದ್ ನಲ್ಲಿ ಹೊಸ ಏರ್ ಪೋರ್ಟ್​ ಒಂದನ್ನು ನಿರ್ಮಿಸಲಾಗಿದೆ. ಈ ಎಲ್ಲ ಸೌಕರ್ಯಗಳು ಕುಂಭಮೇಳದ ವೈಭವ ಹಾಗೂ ಆದಾಯವನ್ನು ಹೆಚ್ಚಿಸಿವೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com