70ನೇ ಗಣರಾಜ್ಯೋತ್ಸವ ಸಂಭ್ರಮ: ಕಲರ್ ಫುಲ್ ಡೂಡಲ್ ಮೂಲಕ ಗೂಗಲ್ ಗೌರವ

ದೇಶಾದ್ಯಂತ ಇಂದು 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ವಿಶೇಷ ಡೂಡಲ್ ಮೂಲಕ ದೇಶದ ಜನತೆಗೆ ಶುಭ ಕೋರಿದೆ.
ಡೂಡಲ್ ಮೂಲಕ ಗೂಗಲ್ ಗೌರವ
ಡೂಡಲ್ ಮೂಲಕ ಗೂಗಲ್ ಗೌರವ
ನವದೆಹಲಿ: ದೇಶಾದ್ಯಂತ ಇಂದು 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ವಿಶೇಷ ಡೂಡಲ್ ಮೂಲಕ ದೇಶದ ಜನತೆಗೆ ಶುಭ ಕೋರಿದೆ.
ಗಣರಾಜ್ಯೋತ್ಸವದ ನಿಮಿತ್ತ ಭಾರತದ ಘನ ಪರಂಪರೆಯನ್ನು ಸಾರುವ ವಿಶೇಷ ಗೂಗಲ್ ಡೂಡಲ್ ಮೂಲಕ ಗೂಗಲ್ ಶುಭಕೋರಿದೆ. ಭಾರತದ ಭವ್ಯ ಪರಂಪರೆಯನ್ನು ಸಾರುವ ರಾಷ್ಟ್ರಪತಿ ಭವನ, ದೆಹಲಿ ಪ್ರವಾಸಿ ತಾಣ ಐತಿಹಾಸಿಕ ಕುತುಬ್ ಮಿನಾರ್ ಸೇರಿದಂತೆ ರಾಷ್ಟ್ರಪಕ್ಷಿ ನವಿಲು, ದೇಶದ ಐತಿಹಾಸಿಕ ಪರಂಪರೆಯನ್ನು ಸಾರುವ ಆನೆ ಸೇರಿದಂತೆ ಹಸಿರು ಪರಿಸರ ಸೇರಿದಂತೆ ಕಲರ್ ಫುಲ್ ಡೂಡಲ್ ಮೂಲಕ ಗೂಗಲ್ ದೇಶದ ಜನತೆಗೆ ಶುಭಾಶಯ ಕೋರಿದೆ.
ಇನ್ನು ಬ್ರಿಟೀಷ್ ಆಡಳಿತದ ಅಂತ್ಯದ ಬಳಿಕ ಭಾರತ ದೇಶ ಇಂದು ಸಂಪೂರ್ಣ ಸ್ವರಾಜ್ಯ ಸಾಧಿಸಿದ ನೆನಪಿನಾರ್ಥವಾಗಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com