ನವದೆಹಲಿ: ಪಾಟೀದಾರ್ ಸಮುದಾಯಕ್ಕೆ ಮೀಸಲತಿಯನ್ನು ಆಗ್ರಹಿಸಿ ಹೋರಾಟ ನಡೆಸಿದ್ದ ವ್ಯಕ್ತಿ ಹಾರ್ದಿಕ್ ಪಟೇಲ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಗುಜರಾತ್ ನ ಸುರೇಂದ್ರ ನಗರ್ ನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್ ತಮ್ಮ ಬಾಲ್ಯದ ಗೆಳತಿ ಕಿಂಜಲ್ ಪರಿಖ್ ಅವರನ್ನು ವಿವಾಹವಾಗಿದ್ದಾರೆ.
ಅತ್ಯಂತ ನಿಕಟ ಸ್ನೇಹಿತರು-ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹಾರ್ದಿಕ್ ಪಟೇಲ್-ಕಿಂಜಲ್ ಪರಿಖ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಸಹ ಅಹ್ಮದಾಬಾದ್ ಜಿಲ್ಲೆಯ ಚಂದನ್ ನಗರಿಯವರಾಗಿದ್ದು ಕಿಂಜಲ್ ಪರಿಖ್ ಪದವೀಧರೆಯಾಗಿದ್ದು, ಈಗ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ.