'ಮೋದಿ ರಾಮ, ರಾಹುಲ್ ರಾವಣ, ಪ್ರಿಯಾಂಕಾ ಶೂರ್ಪನಖಿ'; ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಗುಜರಾತ್ ನ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಬೈರಿಯಾ ...
ಬಿಜೆಪಿ ಶಾಸಕ ಬೈರಿಯಾ ಸುರೇಂದ್ರ ಸಿಂಗ್
ಬಿಜೆಪಿ ಶಾಸಕ ಬೈರಿಯಾ ಸುರೇಂದ್ರ ಸಿಂಗ್
Updated on

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಗುಜರಾತ್ ನ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಬೈರಿಯಾ ಸುರೇಂದ್ರ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸೋದರಿ ಪ್ರಿಯಾಂಕಾ ಗಾಂಧಿ ಬಗ್ಗೆ.

ಈ ಬಾರಿ ಅವರು ರಾಹುಲ್ ಗಾಂಧಿಯನ್ನು ರಾವಣನಿಗೆ, ಪ್ರಿಯಾಂಕಾರನ್ನು ರಾವಣನ ತಂಗಿ ಶೂರ್ಪನಖಿ ಮತ್ತು ಪ್ರಧಾನಿ ಮೋದಿಯನ್ನು ಶ್ರೀರಾಮನಿಗೆ ಹೋಲಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಂಕೆಯಲ್ಲಿ ರಾಮ-ರಾವಣರ ಯುದ್ಧ ಆರಂಭಕ್ಕೆ ಮುನ್ನ ತಂಗಿ ಶೂರ್ಪನಖಿಯನ್ನು ರಾವಣ ಶ್ರೀರಾಮನ ಬಳಿಗೆ ಕಳುಹಿಸುತ್ತಾನೆ. ಇಂದಿನ ಯುದ್ಧದಲ್ಲಿ ರಾವಣನ ಪಾತ್ರವನ್ನು ರಾಹುಲ್ ಗಾಂಧಿ, ರಾಮನ ಪಾತ್ರವನ್ನು ಪ್ರಧಾನಿ ಮೋದಿ ನಿಭಾಯಿಸುತ್ತಿದ್ದಾರೆ. ಶೂರ್ಪನಖಿಯಾಗಿ ಪ್ರಿಯಾಂಕಾರನ್ನು ರಾಹುಲ್ ಗಾಂಧಿ ಯುದ್ಧದ ಕಣಕ್ಕಿಳಿಸಿದ್ದಾರೆ ಎಂದರು. ಅಂದು ರಾಮ ಲಂಕೆಯನ್ನು ಯುದ್ಧದಲ್ಲಿ ಗೆದ್ದಂತೆ ಈ ಬಾರಿ ಕೂಡ ಮೋದಿಯೇ ಚುನಾವಣೆಯೆಂಬ ಯುದ್ಧದಲ್ಲಿ ಗೆಲ್ಲುತ್ತಾರೆ ಎಂದರು.

ಕಾಂಗ್ರೆಸ್ ಸ್ಥಿತಿ ಮುಳುಗುವ ಹಡಗಿನಂತಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ಕಾಯ್ದೆಯಿಂದಾಗಿ ರಾಜಸ್ತಾನ, ಮಧ್ಯ ಪ್ರದೇಶಗಳಲ್ಲಿ ಗೆದ್ದು ಮುಳುಗುತ್ತಿರುವ ಹಡಗಿಗೆ ಕೊಂಚ ಆಸರೆ ಸಿಕ್ಕಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಹೀಗಾಗಿ ಕಾಂಗ್ರೆಸ್ ಗೆ ಮುಖ ತೋರಿಸುವ ಭಾಗ್ಯವಾದರೂ ಸಿಕ್ಕಿದೆ. ಇಲ್ಲದಿದ್ದರೆ ಎಲ್ಲಾ ಕಡೆಯೂ ಸೋತು ಸುಣ್ಣವಾಗಿ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ ಗೆ ಬರುತ್ತಿತ್ತು ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com