ಬಾಬಾ ರಾಮದೇವ್
ದೇಶ
ರಾಮ, ಕೃಷ್ಣ ಧೂಮಪಾನ ಮಾಡುತ್ತಿರಲಿಲ್ಲ, ನಾವೇಕೆ ಮಾಡಬೇಕು? ಸಾಧುಗಳಿಗೆ ರಾಮದೇವ್
ನಾವು ರಾಮ ಮತ್ತು ಕೃಷ್ಣರ ಅನುಯಾಯಿಗಳು, ಅವರು ಧೂಮಪಾನ ಮಾಡುತ್ತಿರಲಿಲ್ಲ, ನಾವೇಕೆ ಮಾಡಬೇಕು ಎಂದು ಕುಂಭಮೇಳದಲ್ಲಿನ ಸಾಧುಗಳಿಗೆ ...
ಪ್ರಯಾಗರಾಜ್: ನಾವು ರಾಮ ಮತ್ತು ಕೃಷ್ಣರ ಅನುಯಾಯಿಗಳು, ಅವರು ಧೂಮಪಾನ ಮಾಡುತ್ತಿರಲಿಲ್ಲ, ನಾವೇಕೆ ಮಾಡಬೇಕು ಎಂದು ಕುಂಭಮೇಳದಲ್ಲಿನ ಸಾಧುಗಳಿಗೆ ಯೋಗಗುರು ಬಾಬಾ ರಾಮ್ ದೇವ್ ಪ್ರಶ್ನಿಸಿದ್ದಾರೆ.
ರಾಮ ಮತ್ತು ಕೃಷ್ಣ ಇಬ್ಬರು ಜೀವನದಲ್ಲಿ ಎಂದಿಗೂ ದೂಮಪಾನ ಮಾಡಿರಲಿಲ್ಲ, ಹೀಗಾಗಿ ನಾವು ಕೂಡ ಎಂದಿಗೂ ಮಾಡಬಾರದು, ಸಾಧುಗಳು ಎಲ್ಲವನ್ನು ಬಿಟ್ಟಿರುತ್ತಾರೆ, ಮನೆ, ತಂದೆ, ತಾಯಿ ಎಲ್ಲರನ್ನು ಬಿಟ್ಟಿರುತ್ತಾರೆ, ಆದರೆ ದೂಮಪಾನ ಮಾತ್ರ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹಲವು ಸಾಧುಗಳಿಂದ ಅವರು ಧೂಮಪಾನ ಮಾಡುವ ಹೊಗೆ ಪೈಪ್ ಗಳನ್ನು ಕಿತ್ತುಕೊಂಡ ರಾಮದೇವ್, ಇನ್ನು ಮೇಲೆ ದೂಮಪಾನ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡರು, ಒಂದು ಸಂಗ್ರಹಾಲಯ ಕಟ್ಟಿಸಿ ಎಲ್ಲಾ ಚಿಲಂಗಳನ್ನು ಅದರಲ್ಲಿ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
55 ದಿನಗಳ ಕುಂಭಮೇಳ ಮಾರ್ಚ್ 4ರಂದು ಪೂರ್ಣಗೊಳ್ಳಲಿದೆ, ಈ ಕುಂಭಮೇಳದಲ್ಲಿ 130 ಮಿಲಿಯನ್ ಮಂದಿ ಪಾಲ್ಗೋಳ್ಳಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ