ಭಾರತ-ಬಾಂಗ್ಲಾ: ರಾಷ್ಟ್ರಗಳು ಎದುರಾಳಿಯಾಗಿದ್ದರೂ ರಾಷ್ಟ್ರಗೀತೆಯ ಮೂಲ ಒಂದೇ!

ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿರುವ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾರತ- ಬಾಂಗ್ಲಾ ಎದುರಾಳಿ ರಾಷ್ಟ್ರಗಳಾಗಿ ನಿಂತಿವೆ.
ಭಾರತ-ಬಾಂಗ್ಲಾ: ರಾಷ್ಟ್ರಗಳು ಎದುರಾಳಿಯಾಗಿದ್ದರೂ ರಾಷ್ಟ್ರಗೀತೆಯ ಮೂಲ ಒಂದೇ!
ಭಾರತ-ಬಾಂಗ್ಲಾ: ರಾಷ್ಟ್ರಗಳು ಎದುರಾಳಿಯಾಗಿದ್ದರೂ ರಾಷ್ಟ್ರಗೀತೆಯ ಮೂಲ ಒಂದೇ!
Updated on
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿರುವ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾರತ- ಬಾಂಗ್ಲಾ ಎದುರಾಳಿ ರಾಷ್ಟ್ರಗಳಾಗಿ ನಿಂತಿವೆ. 
ವಿಶ್ವಕಪ್ ಗೆಲ್ಲುವ ಕನಸಷ್ಟೇ ಎರಡೂ ರಾಷ್ಟ್ರಗಳ ಸಮಾನ ಅಂಶವಾಗಿಲ್ಲ, ಬದಲಾಗಿ ಎರಡೂ ರಾಷ್ಟ್ರಗಳಿಗೆ ರಾಷ್ಟ್ರಗೀತೆ ಬರೆದವರು ರವೀಂದ್ರನಾಥ್ ಠಾಗೂರ್. ಪಂದ್ಯ ಪ್ರಾರಂಭವಾಗುತ್ತಿದ್ದಂತೆಯೇ ಉಭಯ ರಾಷ್ಟ್ರಗಳ ಪ್ರಜೆಗಳೂ ಸಾಮಾಜಿಕ ಜಾಲತಣಾಗಳಲ್ಲಿ ರವೀಂದ್ರನಾಥ್ ಠಾಗೂರ್ ಅವರನ್ನು ಸ್ಮರಿಸಿದ್ದಾರೆ. 
1905 ರಲ್ಲಿ ಬ್ರಿಟೀಷರು ಬಂಗಾಳವನ್ನು ವಿಭಜನೆ ಮಾಡಿದ ನಂತರ ಠಾಗೂರ್ ಅವರು ’ಅಮರ್ ಸೋನಾ ಬಾಂಗ್ಲಾ’ ರಚನೆ ಮಾಡಿದ್ದರು. ಠಾಗೂರ್ ರ ರಚನೆಯ ಮೊದಲ ಚರಣ ಭಾರತ ಭಾಗ್ಯ ವಿಧಾತವನ್ನು ಭಾರತದ ರಾಷ್ಟ್ರಗೀತೆ ’ಜನ ಗಣ ಮನ’ದಲ್ಲಿ 1950 ರಲ್ಲಿ ಅಳವಡಿಸಿಕೊಳ್ಳಲಾಯಿತು. ಅಮರ್ ಸೋನಾ ಬಾಂಗ್ಲಾದ ಮೊದಲ 10 ಸಾಲುಗಳನ್ನು 1971 ರಲ್ಲಿ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಬಾಂಗ್ಲಾ ದೇಶ ತನ್ನ ರಾಷ್ಟ್ರಗೀತೆಗೆ ಅಳವಡಿಸಿಕೊಂಡಿತು. 

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com