ಭ್ರಷ್ಟಾಚಾರ ಆರೋಪ: ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದ ಭಾರತ

ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದೆ ಎಂದು ತಿಳಿದುಬಂದಿದೆ.
ಭಾರತೀಯ ವಾಯು ಸೇನೆ ಸೇರಿದಂತೆ ಭಾರತಕ್ಕೆ ತರಬೇತಿ ವಿಮಾನಗಳ ಮಾರಾಟ ಮಾಡುತ್ತಿದ್ದ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ಭಾರತೀಯ ರಕ್ಷಣಾ ಸಚಿವಾಲಯ ಒಂದು ವರ್ಷಗಳ ಕಾಲ ನಿಷೇಧ ಹೇರಿದೆ. ಪಿಲಾಟಸ್ ವಿಮಾನ ಸಂಸ್ಛೆ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಇದೇ ಕಾರಣಕ್ಕೆ ಆ ಸಂಸ್ಥೆ ವಿರುದ್ಧ ನಿಷೇಧ ಜಾರಿ ಮಾಡಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಪಿಲಾಟಸ್  ವಿಮಾನ ಸಂಸ್ಛೆಯ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪವನ್ನು ತನಿಖೆ ನಡೆಸುತ್ತಿದ್ದು, 2012ರಲ್ಲಿ ಭಾರತಕ್ಕೆ ತರಬೇತಿ ವಿಮಾನ ನೀಡುವ ಒಪ್ಪಂದ ಮಾಡಿಕೊಳ್ಳಲು ಆ ಸಂಸ್ಥೆಯ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರಕ್ಷಣಾ ಸಚಿವಾಲಯ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ಒಂದು ವರ್ಷಗಳ ಕಾಲ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com