ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ; ವ್ಯಾಪಾರ ಸಂಘಟನೆಗಳಿಂದ ಆ.2ರಂದು ದೇಶಾದ್ಯಂತ ಪ್ರತಿಭಟನೆ

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಶಾಸನ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿ 10 ಕೇಂದ್ರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಶಾಸನ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿ 10 ಕೇಂದ್ರ ವ್ಯಾಪಾರ ಸಂಘಟನೆಗಳು ಆಗಸ್ಟ್ 2ರಂದು ದೇಶವ್ಯಾಪಿ ಪ್ರತಿಭಟನೆಗೆ ಮುಂದಾಗಿವೆ. 
ಲೋಕಸಭೆಯಲ್ಲಿ ಸರ್ಕಾರ ಮಂಡಿಸಿರುವ ಎರಡು ಕಾರ್ಮಿಕ ವಿರೋಧಿ ಕಾನೂನು ನಿಯಮಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಸಂಘಟನೆಗಳು ಒತ್ತಾಯಿಸಿವೆ.
ಕೇಂದ್ರ ವ್ಯಾಪಾರ ಸಂಘಟನೆಗಳಾದ ಐಎನ್ ಟಿಯುಸಿ, ಎಐಟಿಯುಸಿ, ಹೆಚ್ ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್ಇಡಬ್ಲ್ಯುಎ, ಎಐಸಿಸಿಟಿಯು, ಎಲ್ ಪಿಎಫ್, ಯುಟಿಯುಸಿ ಮತ್ತು ಸ್ವತಂತ್ರ ಒಕ್ಕೂಟಗಳು/ಸಂಘ ಸಂಸ್ಥೆಗಳು ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿವೆ. ವ್ಯಾಪಾರ ಒಕ್ಕೂಟಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದರೂ ಕೂಡ ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೆ ವಿರುದ್ಧವಾಗಿ ಕಾರ್ಮಿಕ ಕಾನೂನುಗಳು ಮತ್ತು ಇತರ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿಕೆಯಲ್ಲಿ ಸಂಘಟನೆಗಳು ತಿಳಿಸಿವೆ.
ಆಡಳಿತಾರೂಢ ಸರ್ಕಾರದ ಈ ನಿಯಮವನ್ನು ಸದನದಲ್ಲಿ ವಿಪಕ್ಷಗಳ ಸದಸ್ಯರು ವಿರೋಧಿಸಬೇಕೆಂದು ಕೂಡ ವ್ಯಾಪಾರ ಸಂಘಟನೆಗಳು ಹೇಳಿಕೆಯಲ್ಲಿ ಒತ್ತಾಯಿಸಿವೆ.
ಕೇಂದ್ರ ಸರ್ಕಾರ ವೇತನ ಮಸೂದೆ 2019 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಮಸೂದೆ-2019 ಲೋಕಸಭೆಯಲ್ಲಿ ಮೊನ್ನೆ ಸರ್ಕಾರ ಮಂಡಿಸಿದೆ. ಈ ಎರಡೂ ಮಸೂದೆಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವುದಲ್ಲದೆ ಕೇಂದ್ರ ವ್ಯಾಪಾರ ಸಂಘಟನೆಗಳ ಒಕ್ಕೂಟಗಳು ಎತ್ತಿರುವ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ.ಈಗಿರುವ ಕಾನೂನಿನಡಿಯಲ್ಲಿ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯಗಳಿಂದ ಹೊಸ ಕಾನೂನಿನಲ್ಲಿ ಹೊರಗಿಡಲಾಗಿದೆ ಎಂದು ಆಕ್ಷೇಪಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com