ನವದೆಹಲಿ: ಇಂದು ವಿಶ್ವ ಹುಲಿ ದಿನ, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಖಿಲ ಭಾರತ ಹುಲಿ ಅಂದಾಜು ವರದಿ 2018ನ್ನು ಬಿಡುಗಡೆಗೊಳಿಸಿದ್ದಾರೆ.ಹುಲಿಗಳಿಗೆ ವಿಶ್ವದ ಅತಿದೊಡ್ಡ ಮತ್ತು ಸುರಕ್ಷಿತ ಆವಾಸಸ್ಥಾನವಾಗಿ ಭಾರತ ದೇಶ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.ದೇಶದ ಹುಲಿಗಳ ಸಂಖ್ಯೆ 2014ರಲ್ಲಿ 1,400 ಇದ್ದದ್ದು 2019 ರಲ್ಲಿ 2,977 ಕ್ಕೆ ಏರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.