ವಯನಾಡಿಗೆ ಆಗಮಿಸಿದ ರಾಹುಲ್, 'ನಮ್ಮನ್ನು ಮುನ್ನಡೆಸಲು ನೀವು ಬೇಕು' ಎಂಬ ಪೋಸ್ಟರ್ ಗಳ ಸ್ವಾಗತ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ ಕೇರಳದ ವಯನಾಡು ಮತದಾರರಿಗೆ....
ರಾಹುಲ್ ಗಾಂಧಿಯನ್ನು ಸ್ವಾಗತಿಸುತ್ತಿರುವ ಕಾರ್ಯಕರ್ತರು
ರಾಹುಲ್ ಗಾಂಧಿಯನ್ನು ಸ್ವಾಗತಿಸುತ್ತಿರುವ ಕಾರ್ಯಕರ್ತರು
Updated on: 
ಮಲಾಪುರಂ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ ಕೇರಳದ ವಯನಾಡು ಮತದಾರರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಆಗಮಿಸಿದ್ದು, ಅವರಿಗೆ 'ನಮ್ಮನ್ನು ಮುನ್ನಡೆಸಲು ನೀವು ಬೇಕು' ಎಂಬ ಪೋಸ್ಟರ್ ಗಳ ಮೂಲಕ ಅದ್ಧೂರಿ ಸ್ವಾಗತ ನೀಡಲಾಗಿದೆ.
ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರ ವಯನಾಡು ಸೇರಿದಂತೆ ಕೇರಳ ಭೇಟಿಗೆ ಮೂರು ದಿನಗಳನ್ನು ಮೀಸಲಾಗಿ ಇರಿಸಿದ್ದು, ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕ್ಯಾಲಿಕಟ್ ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ.
ಮಳೆ ಹಾಗೂ ಮೋಡದ ನಡುವೆಯೂ ತಮ್ಮನ್ನು ಭೇಟಿ ಮಾಡಲು ಬಂದ ರಾಹುಲ್ ಗಾಂಧಿ ಅವರಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು 'ನಮ್ಮನ್ನು ಮುನ್ನಡೆಸಲು ನೀವು ಬೇಕು' ಎಂಬ ಪೋಸ್ಟರ್ ಗಳನ್ನು ಹಿಡಿದು ಸ್ವಾಗತಿಸಿದರು.
ರಾಹುಲ್‌ ಗಾಂಧಿ ಅವರು ವಯನಾಡು ಲೋಕಸಭಾ ಕ್ಷೇತ್ರದಲ್ಲಿ 4.31 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ನಂತರ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಎಡವಣ್ಣ, ಅರೀಕೋಡ್, ಕಾಳಿಕಾವು ಮತ್ತು ನಿಲಂಬೂರ್ನಲ್ಲಿ ಮತದಾರರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com