ಗಡಿಯಲ್ಲಿ ನಾವಿದ್ದೇವೆ ಎಂದು ಜನ ಆರಾಮಾಗಿ ನಿದ್ರಿಸುತ್ತಿದ್ದಾರೆ, ನಾವು ತಾಪಮಾನಕ್ಕೆ ಭಯಪಟ್ಟರೆ ಹೇಗೆ?: ಸೈನಿಕರ ಮಾತು

ಗಡಿಯಲ್ಲಿ ನಾವಿದ್ದೇವೆ ಎಂದು ಜನ ಆರಾಮಾಗಿದ್ದಾರೆ, ತಾಪಮಾನಕ್ಕೆ ಭಯಪಟ್ಟರೆ ಹೇಗೆ? ಎಂಬ ಭಾರತೀಯ ಸೈನಿಕರೊಬ್ಬರ ಹೇಳಿಕೆ ಇದೀಗ ವೈರಲ್ ಆಗಿದೆ.
ಸುದ್ದಿಸಂಸ್ಥೆಯೊಂದಿಗೆ ಸೈನಿಕ
ಸುದ್ದಿಸಂಸ್ಥೆಯೊಂದಿಗೆ ಸೈನಿಕ
ಶ್ರೀನಗರ: ಗಡಿಯಲ್ಲಿ ನಾವಿದ್ದೇವೆ ಎಂದು ಜನ ಆರಾಮಾಗಿದ್ದಾರೆ, ತಾಪಮಾನಕ್ಕೆ ಭಯಪಟ್ಟರೆ ಹೇಗೆ? ಎಂಬ ಭಾರತೀಯ ಸೈನಿಕರೊಬ್ಬರ ಹೇಳಿಕೆ ಇದೀಗ ವೈರಲ್ ಆಗಿದೆ.
ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಬೇಸಿಲ ಧಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಜನರಿಗೆ ಮಾತ್ರವಲ್ಲದೇ ಅಲ್ಲಿ ಗಡಿ ಕಾಯುವ ಸೈನಿಕರೂ ಕೂಡ ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಆದರೂ ಪಟ್ಟು ಬಿಡದೆ ಗಡಿ ಕಾಯುತ್ತಿದ್ದು, ಯಾವುದೇ ರೀತಿಯ ಪ್ರತೀಕೂಲ ಪರಿಸ್ಥಿತಿಗಳಿಗೂ ನಾವು ಸಿದ್ಧ ಎಂದು ಹೇಳುತ್ತಿದ್ದಾರೆ.
ಇದೀಗ ಸುದ್ದಿಸಂಸ್ಥೆಯೊಂದಕ್ಕೆ ಸೈನಿಕರೊಬ್ಬರು ನೀಡಿರುವ ಹೇಳಿಕೆ ವ್ಯಾಪಕ ವೈರಲ್ ಆಗುತ್ತಿದ್ದು, ಸೈನಿಕನ ಹೇಳಿಕೆಗೆ ಇಂಟರ್ ನೆಟ್ ಲೋಕ ಸೆಲ್ಯೂಟ್ ಹೊಡೆಯುತ್ತಿದೆ. 
ಕಾಶ್ಮೀರದಲ್ಲಿ ಇಂಡೋ-ಪಾಕ್ ಗಡಿಯಲ್ಲಿ ಪಹರೆ ಕಾಯುತ್ತಿದ್ದ ಯೋಧರಿಗೆ ಸುದ್ದಿಸಂಸ್ಛೆಯ ವರದಿಗಾರ ಬಿಸಿಲಿನ ಕುರಿತು ಪ್ರಶ್ನೆ ಕೇಳಿದ್ದು, ಈ ವೇಳೆ ಉತ್ತರಿಸಿದ ಯೋಧ, ಗಡಿಯಲ್ಲಿ ನಾವಿದ್ದೇವೆ ಎಂದು ಜನ ಅಲ್ಲಿ ಆರಾಮವಾಗಿ ನಿದ್ರಿಸುತ್ತಿದ್ದಾರೆ. ಹೀಗಿರುವಾಗ ನಾವು ಕೇವಲ ತಾಪಮಾನಕ್ಕೆ ಹೆದರಿದರೆ ಹೇಗೆ.. ತಾಪಮಾನವಷ್ಟೇ ಅಲ್ಲ ಎಂತಹುದೇ ಪರಿಸ್ಥಿತಿ ಬಂದರೂ ನಾವು ನಮ್ಮ ಕರ್ತವ್ಯದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾವಾಗಲೂ ನಾವು ಅಲರ್ಟ್ ಆಗಿರುತ್ತೇವೆ ಎಂದು ಹೇಳಿದ್ದಾರೆ. ಸೈನಿಕರ ಈ ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಯೋಧರ ಕೆಚ್ಚೆದೆಗೆ ದೇಶದ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ವರ್ಷ ಉತ್ತರ ಭಾರತದಲ್ಲಿ ಬೇಸಿಗೆಯ ಧಗೆ ಹೆಚ್ಚಾಗಿದ್ದು, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ಗರಿಷ್ಠ ಪ್ರಮಾಣ ತಲುಪಿದ್ದು, ರಾಜಸ್ತಾನ, ಮದ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲೂ ಗರಿಷ್ಟ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 2 ತಿಂಗಳಿನಿಂದ ರಾಜಸ್ತಾನದಲ್ಲಿ ಬಿಸಿಲ ಆರ್ಭಟ ಹೆಚ್ಚಾಗಿದ್ದು, ಇಲ್ಲಿನ ಚುರುವಿನಲ್ಲಿ ತಾಪಮಾನ ಮತ್ತೆ 50 ಡಿಗ್ರಿ ದಾಟುವ ಮೂಲಕ ಸುದ್ದಿಗೆ ಗ್ರಾಸವಾಗಿದೆ. ಇದೇ ಜೂನ್ 2ರಂದು ಇಲ್ಲಿ ತಾಪಮಾನ 50.8 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗಿತ್ತು. ಇದೀಗ ಮತ್ತೆ 50 ಡಿಗ್ರಿಗೆ ತಲುಪುವ ಮೂಲಕ ಒಂದೇ ತಿಂಗಳಲ್ಲಿ 2 ಬಾರಿ ಚುರುವಿನಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದೆ.  ಈ ಹಿಂದೆ ಅಂದರೆ 2016ರ ಮೇ 19ರಂದು ಚುರುನಲ್ಲಿ ಶನಿವಾರ 50.2 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಜೂನ್ 2ರಂದು ಅದನ್ನೂ ಮೀರಿದ ಉಷ್ಣಾಂಶ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com