ಜೈ ಶ್ರೀರಾಮ್ ಹೇಳದ್ದಕ್ಕೆ ಯುವಕನಿಗೆ ಥಳಿತ

ಜೈ ಶ್ರೀರಾಮ್ ಘೋಷಣೆ ಹೇಳದ್ದಕ್ಕೆ 16 ವರ್ಷದ ಯುವಕನಿಗೆ ಅನಾಮಿಕ ವ್ಯಕ್ತಿಗಳು ಮನಸೋ ಇಚ್ಛೆ ಥಳಿಸಿರುವ ಘಟನೆ ಖಾನ್ ಪುರದಲ್ಲಿ ನಡೆದಿದೆ.
ಜೈ ಶ್ರೀರಾಮ್ ಹೇಳದ್ದಕ್ಕೆ ಯುವಕನಿಗೆ ಥಳಿತ
ಜೈ ಶ್ರೀರಾಮ್ ಹೇಳದ್ದಕ್ಕೆ ಯುವಕನಿಗೆ ಥಳಿತ
Updated on
ಜೈ ಶ್ರೀರಾಮ್ ಘೋಷಣೆ ಹೇಳದ್ದಕ್ಕೆ 16 ವರ್ಷದ ಯುವಕನಿಗೆ ಅನಾಮಿಕ ವ್ಯಕ್ತಿಗಳು ಮನಸೋ ಇಚ್ಛೆ ಥಳಿಸಿರುವ ಘಟನೆ ಖಾನ್ ಪುರದಲ್ಲಿ ನಡೆದಿದೆ. 
ಮೊಹಮ್ಮದ್ ತಾಜ್ ಹಲ್ಲೆಗೊಳಗಾದ ಯುವಕನಾಗಿದ್ದು, ಆತ ಸಾಂಪ್ರದಾಯಿಕ ಟೋಪಿ ಹಾಕಿಕೊಂಡಿದ್ದ ಹಾಗೂ ಜೈ ಶ್ರೀರಾಮ್ ಘೋಷಣೆ ಹೇಳಲು ನಿರಾಕರಿಸಿದ್ದ. 
ನಮಾಜ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಮೊಹಮ್ಮದ್ ತಾಜ್ ಮೇಲೆ ಹಲ್ಲೆ 3-4 ಜನ ಅನಾಮಿಕ ದ್ವಿಚಕ್ರ ವಾಹನ ಸವಾರರು ಆತನನ್ನು ತಡೆದಿದ್ದು ಸಾಂಪ್ರದಾಯಿಕ ಟೋಪಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿದ್ದಾರೆ ಒಪ್ಪದೇ ಇದ್ದಾಗ ಟೋಪಿಯನ್ನು ಕಿತ್ತೆಸೆದು ಆತನನ್ನು ಒದ್ದು, ಥಳಿಸಿದ್ದಾರೆ.  
ಘಟನೆ ಬಗ್ಗೆ ಮೊಹಮ್ಮದ್ ತಾಜ್ ಹೇಳಿಕೆ ನೀಡಿದ್ದು, ಥಳಿಸಿದ ವ್ಯಕ್ತಿಗಳು ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಟೋಪಿ ಹಾಕಿಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಎಚ್ಚರಿಸಿದ್ದಾಗಿ ಹೇಳಿದ್ದಾನೆ. 
ತಾನು ಸಹಾಯಕ್ಕಾಗಿ ಕೇಳುತ್ತಿದ್ದಾಗ ಸ್ಥಳೀಯರು ಬಂದು ರಕ್ಷಿಸಿದರು, ಈ ಬೆನ್ನಲ್ಲೆ ಆಕ್ರಮಣ ಮಾಡಿದವರು ಪರಾರಿಯಾಗಿದ್ದರೆಂದು ಮೊಹಮ್ಮದ್ ತಾಜ್ ಹೇಳಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com