ಭಾರತದ ವೀರಪುತ್ರ ಅಭಿನಂದನ್ ಕೆಲವೇ ಕ್ಷಣದಲ್ಲಿ ತಾಯ್ನಾಡಿಗೆ ಆಗಮನ, ಮುಗಿಲು ಮುಟ್ಟಿದ ಸಂಭ್ರಮ

ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ವಾಘಾ ಗಡಿ ಪ್ರದೇಶದ ಮೂಲಕ ಬಾರತಕ್ಕೆ ಹಿಂದಿರುಗಲಿದ್ದಾರೆ. ಲಾಹೋರ್ ನಿಂದ 22 ಕಿಮೀ ದೂರದ ಅಟಾರಿ, ವಾಘಾ ಗಡಿಯಲ್ಲಿ....
ವಾಘಾ ಗಡಿ
ವಾಘಾ ಗಡಿ
 ನವದೆಹಲಿ: ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಶುಕ್ರವಾರ ವಾಘಾ ಗಡಿ ಪ್ರದೇಶದ ಮೂಲಕ ಬಾರತಕ್ಕೆ ಹಿಂದಿರುಗಲಿದ್ದಾರೆ. ಲಾಹೋರ್ ನಿಂದ 22 ಕಿಮೀ ದೂರದ ಅಟಾರಿ, ವಾಘಾ ಗಡಿಯಲ್ಲಿ ಪಾಕಿಸ್ತಾನವು ಅಭಿನಂದನ್ ಅವರನ್ನು ಭಾರತೀಯ ವಾಯುಸೇನೆಗೆ ಹಸ್ತಾಂತರಿಸಲಿದೆ.
ಮೊದಲಿಗೆ ಪಾಕ್ ರೇಂಜರ್ಸ್‌ಗಳಿಗೆ ಅಭಿನಂದನ್ ಹಸ್ತಾಂತರ  ಆಗಲಿದ್ದು ಬಳಿಕ ಅವರನ್ನು ಅಮೃತಸರಕ್ಕೆ ಕರೆದೊಯ್ಯಲಾಗುವುದು. ಇದಾಗಲೇ ಪಾಕಿಸ್ತಾನದಿಂದ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ಮುಕ್ತಾಯವಾಗಿದೆ.
ಇನ್ನು ಕೆಲವೇ ಕ್ಷಣಗಳಲ್ಲಿ ಅಭಿನಂದನ್ ವಾಘಾ ತಲುಪಲಿದ್ದು ಸ್ಥಳದಲ್ಲಿ ಐಎಎಫ್ ಅಧಿಕಾರಿಗಳು ಸೇರಿ ಅನೇಕ ದೇಶಾಭಿಮಾನಿಗಳು ದೇಶದ ಹೆಮ್ಮೆಯ ಪುತ್ರನ ಆಗಮನಕ್ಕೆ ಕಾತುರದಿಂದ ಕಾಯ್ತುತ್ತಿದ್ದಾರೆ.
ಒಮ್ಮೆ ಅಭಿನಂದನ್ ಅವರು ಭಾರತಕ್ಕೆ ಆಗಮಿಸಿದ ನಂತರ ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ನಂತರ ಐಎಫ್ಎಫ್  ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುವುದು. ಇದಾಗಲೇ ಚೆನ್ನೈನಿಂದ ದೆಹಲಿಗೆ ಅಭಿನಂದನ್ ಪೋಷಕರು ತಲುಪಿದ್ದಾರೆ.
ಅಭಿನಂದನ್ ಅವರ ಆಗಮನದ ಹಿನ್ನೆಲೆಯಲ್ಲಿ ವಾಘಾ ಗಡಿಯಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮವನ್ನು ಶುಕ್ರವಾರ ರದ್ದುಪಡಿಸಲಾಗಿದೆ.
ವಾಘಾ ಗಡಿಯಲ್ಲಿ ಅಭಿನಂದನ್ ಅವರ ಸ್ವಾಗತಕ್ಕೆ ಆಗಮಿಸಬೇಕಾಗಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಾರಣಾಂತರದಿಂದ ಬರಲಾಗಲಿಲ್ಲ. ಅದಕ್ಕಾಗಿ ಅವರು ಟ್ವಿಟ್ ಮೂಲಕ ತಮ್ಮ ಶುಭಾಶಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com