ಎಫ್-16 ಹೊಡೆದುರುಳಿಸಿದ್ದಕ್ಕೆ ಭಾರತದ ವಿರುದ್ಧ ಮೊಕದ್ದಮೆ: ಪಾಕಿಸ್ತಾನದ ಪ್ರತಿಪಾದನೆ ತಳ್ಳಿಹಾಕಿದ ಲಾಕ್ಹೀಡ್ ಮಾರ್ಟಿನ್
ಎಫ್-16 ಹೊಡೆದುರುಳಿಸಿದ್ದಕ್ಕೆ ಭಾರತದ ವಿರುದ್ಧ ಮೊಕದ್ದಮೆ: ಪಾಕಿಸ್ತಾನದ ಪ್ರತಿಪಾದನೆ ತಳ್ಳಿಹಾಕಿದ ಲಾಕ್ಹೀಡ್ ಮಾರ್ಟಿನ್

ಎಫ್-16 ಹೊಡೆದುರುಳಿಸಿದ್ದಕ್ಕೆ ಭಾರತದ ವಿರುದ್ಧ ಮೊಕದ್ದಮೆ: ಪಾಕ್ ಪ್ರತಿಪಾದನೆ ತಳ್ಳಿಹಾಕಿದ ಲಾಕ್ಹೀಡ್ ಮಾರ್ಟಿನ್

ವಾಯುಗಡಿಯನ್ನು ಉಲ್ಲಂಘಿಸಿದ್ದ ಎಫ್-16 ನ್ನು ಹೊಡೆದುರುಳಿಸಿದ್ದ ಭಾರತದ ವಿರುದ್ಧ ಮೊಕದ್ದಮೆ ಹೂಡುವುದಿಲ್ಲ ಎಂದು ಎಫ್-1 ತಯಾರಿಕಾ ಸಂಸ್ಥೆ ಸ್ಪಷ್ಟಪಡಿಸಿದೆ.
ನವದೆಹಲಿ: ವಾಯುಗಡಿಯನ್ನು ಉಲ್ಲಂಘಿಸಿದ್ದ ಎಫ್-16 ನ್ನು ಹೊಡೆದುರುಳಿಸಿದ್ದ ಭಾರತದ ವಿರುದ್ಧ ಮೊಕದ್ದಮೆ ಹೂಡುವುದಿಲ್ಲ ಎಂದು ಎಫ್-16 ತಯಾರಿಕಾ ಸಂಸ್ಥೆ ಸ್ಪಷ್ಟಪಡಿಸಿದೆ. 
ಮಿಗ್-21 ರಿಂದ ಎಫ್-16 ನ್ನು ಹೊಡೆದುರುಳಿಸಿದ್ದ ಭಾರತದ ವಿರುದ್ಧ ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಕೇಸ್ ದಾಖಲಿಸುತ್ತದೆ ಎಂದು ಪಾಕಿಸ್ತಾನ ಅಧಿಕಾರಿಗಳು ಸುದ್ದಿ ಹಬ್ಬಿಸಿದ್ದರು. ಆದರೆ ಈ ಸುದ್ದಿಯನ್ನು ಸುಳ್ಳು ಸುದ್ದಿ ಎಂದು ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಸ್ಪಷ್ಟನೆ ನೀಡಿದೆ. 
ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಿತ್ತರವಾದ ಸುಳ್ಳುಸುದ್ದಿಯನ್ನು ಪಾಕಿಸ್ತಾನದ ಸೆನ್ಸಾರ್ ಬೋರ್ಡ್ ನ ಅಧ್ಯಕ್ಷ ಡನ್ಯಾಲ್ ಗಿಲಾನಿಯೂ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಆದರೆ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಸ್ಪಷ್ಟನೆ ನೀಡಿದ ಬೆನ್ನಲ್ಲೆ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. 
ಎಫ್-16 ನ್ನು ಹೊಡೆದುರುಳಿಸಿದ್ದಕ್ಕಾಗಿ ಭಾರತದ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಸಂಸ್ಥೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ಸಂಸ್ಥೆ ತಿಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com