ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್
ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಪಾಕ್‌ಗೆ ಮಾಸ್ಟರ್ ಸ್ಟ್ರೋಕ್ ಕೊಡುತ್ತಾ ಅಮೆರಿಕಾ?, ಎಫ್-16 ವಾಪಸ್ ಪಡೆದ್ರೆ ಪಾಕ್ ಕತೆ ದೇವ್ರೇ ಗತಿ!

ಯುದ್ಧದ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಪಾತುಪಾತಾಸ್ತ್ರವಾಗಿರುವ ಎಫ್-16 ಯುದ್ಧ ವಿಮಾನವನ್ನು ಭಾರತದ ವಿರುದ್ಧದ ದಾಳಿಗೆ ಬಳಸಿರುವುದಾಗಿ ಭಾರತೀಯ...
ನವದೆಹಲಿ: ಯುದ್ಧದ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಪಾತುಪಾತಾಸ್ತ್ರವಾಗಿರುವ ಎಫ್-16 ಯುದ್ಧ ವಿಮಾನವನ್ನು ಭಾರತದ ವಿರುದ್ಧದ ದಾಳಿಗೆ ಬಳಸಿರುವುದಾಗಿ ಭಾರತೀಯ ವಾಯುಸೇನೆ ಆರೋಪಿಸಿದ್ದು ಇದರ ಬೆನ್ನಲ್ಲೇ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸೂಚಿಸಿದೆ. 
ಎಫ್-16 ಯುದ್ಧ ವಿಮಾನ ಪಾಕಿಸ್ತಾನದ ಬಳಿ ಇರುವ ಅಗ್ರ ಯುದ್ಧ ವಿಮಾನ. ಎಫ್-16 ಎಲ್ಲ ಕಾಲಗಳಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಗಲು ಮತ್ತು ರಾತ್ರಿ ವೇಳೆಯೂ ಯಾವುದೇ ಸಮಸ್ಯೆ ಇಲ್ಲದೆ ಸಂಚರಿಸುತ್ತದೆ. ನಿರ್ಧಿಷ್ಟ ಹಾಗೂ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.
ಅಮೆರಿಕ ಎಫ್-16 ಪಾಕಿಸ್ತಾನಕ್ಕೆ ಭಯೋತ್ಪಾದನೆ ನಿಗ್ರಹಕ್ಕೆ ಕೊಟ್ಟಿತ್ತು. ಅಲ್ಲದೆ ಈ ವೇಳೆ ಷರತ್ತು ಹೊಂದನ್ನು ಹಾಕಿತ್ತು. ಆ ಷರತ್ತಿನ ಪ್ರಕಾರ ಎಫ್-16 ಅನ್ನು ಪಾಕಿಸ್ತಾನ ಭಯೋತ್ಪಾದನೆ ಬಿಟ್ಟು ಬೇರೆ ದೇಶದ ಮೇಲೆ ದಾಳಿಗೆ ಬಳಸುವಂತಿಲ್ಲ. ಆ ಮೂಲಕ ಎಂಡ್-ಯೂಸರ್ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. 
ಇದೀಗ ಭಾರತದ ವಿರುದ್ಧ ದಾಳಿಗೆ ಪಾಕಿಸ್ತಾನ ಎಫ್-16 ಅನ್ನು ಬಳಿಸಿದೆ. ಈ ಯುದ್ಧ ವಿಮಾನವನ್ನು ನಾವು ಹೊಡೆದುರುಳಿಸಿದ್ದೇವೆ. ಆ ಭಾಗದ ವಿಮಾನದ ಅವಶೇಷವನ್ನು ಭಾರತೀಯ ವಾಯುಸೇನೆ ಅಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದರು. ಆದರೆ ಪಾಕಿಸ್ತಾನ ನಾವು ಭಾರತದ ವಿರುದ್ಧ ಎಫ್-16 ಬಳಸಿಯೇ ಇಲ್ಲ ಎಂದು ವಾದಿಸುತ್ತಾ ಬಂದಿದೆ. ಇದೀಗ ಅಮೆರಿಕ ಹೆಚ್ಚಿನ ಮಾಹಿತಿಯನ್ನು ಒದಗಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ.
ಇನ್ನು ಭಾರತ ಸಹ ಅಮೆರಿಕಕ್ಕೆ ಪಾಕಿಸ್ತಾನ ನಮ್ಮ ವಿರುದ್ದ ಎಫ್-16 ಬಳಿಸಿದ್ದು ಅದನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಅಮೆರಿಕದ ಮೇಲೆ ಒತ್ತಡ ಹೇರುತ್ತಿದೆ. ಈ ಒತ್ತಡಕ್ಕೆ ಮಣಿದು ಅಮೆರಿಕ ಎಫ್-16 ವಾಪಸ್ ಕರೆಸಿಕೊಂಡರೆ ಒಂದು ಹಂತದಲ್ಲಿ ಪಾಕಿಸ್ತಾನದ ಜಂಘಾಬಲವೇ ಕುಸಿಯುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com