ಪಾಟ್ನಾ: 2009ರಲ್ಲಿ ಲೂಧಿಯಾನದಲ್ಲಿ ನಡೆದ ರಾಜಕೀಯ ರ್ಯಾಲಿಯ ನಂತರ ಮತ್ತೆ 9 ವರ್ಷದ ನಂತರ ಪ್ರದಾನಿ ನರೇಂದ್ರ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಒಟ್ಟಿಗೆ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ,
ಪಾಟ್ನಾದಲ್ಲಿ ಇಂದು ನಡೆಯುವ ಎನ್ ಡಿಎ ಸಂಕಲ್ಪಯಾತ್ರೆಯಲ್ಲಿ ಮೊದಲ ಬಾರಿಗೆ ಇಬ್ಬರು ಘಟಾನು ಘಟಿಗಳು ವೇದಿಕೆ ಏರಲಿದ್ದಾರೆ. 2005ರ ನವೆಂಬರ್ ನಂತಕ ಎನ್ ಡಿಐ ಮೈತ್ರಿಕೂಟ ಬಿಹಾರದಲ್ಲಿ ನಡೆಸುತ್ತಿರುವ ಮೊದಲ ರ್ಯಾಲಿಯಾಗಿದೆ,
ಗಾಂದಿ ಮೈದಾನದಲ್ಲಿ ನಡೆಯುವ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಬರುವ ಲೋಕಸಬೆ ಚುನಾವಣೆಗಾಗಿ ಅಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ,
ಇನ್ನೂ ಮೋದಿ ಜೊತೆ ವೇದಿಕೆ ಹಂತಚಿಕೊಳ್ಳುತ್ತಿರುವ ಸಿಎಂ ನಿತೀಶ್ ಕುಮಾರ್ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಬೇಕೆಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಒತ್ತಾಯಿಸಿದ್ದಾರೆ,
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಪ್ರದಾನಿ ಮೋದಿ ಘೋಷಿಸಿದ್ದರು, ಆದರೆ ಇದುವೆರಗೂ ನೀಡಿಲ್ಲ, ಸಂಕಲ್ಪ ಯಾತ್ರೆಯಲ್ಲಿ ಇದನ್ನು ಪ್ರಕಟಿಸಲು ನಿತೀಶ್ ಕುಮಾರ್ ಒತ್ತಾಯಿಸುವಂತೆ ಅವರು ಆಗ್ರಹಿಸಿದ್ದಾರೆ.