ಮೂರು ದಾಖಲೆ ಬರೆದ 2019ರ ಮಹಾ ಕುಂಭಮೇಳ

ಉತ್ತರ ಪ್ರದೇಶದ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಕೊನೆಯ ದಿನವಾಗಿದ್ದು, ಕೋಟ್ಯಂತರ ಭಕ್ತರು ಇಂದು ಕೊನೆಯ ಶಾಹಿ ಸ್ನಾನದಲ್ಲಿ ಪಾಲ್ದೊಳ್ಳಲ್ಲಿದ್ದಾರೆ.
ಸಂಗಮದಲ್ಲಿ ಭಕ್ತ ಸಾಗರ
ಸಂಗಮದಲ್ಲಿ ಭಕ್ತ ಸಾಗರ
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಕೊನೆಯ ದಿನವಾಗಿದ್ದು, ಕೋಟ್ಯಂತರ ಭಕ್ತರು ಇಂದು ಕೊನೆಯ ಶಾಹಿ ಸ್ನಾನದಲ್ಲಿ ಪಾಲ್ದೊಳ್ಳಲ್ಲಿದ್ದಾರೆ. ಅಂತೆಯೇ ಹಾಲಿ ವರ್ಷದ ಕುಂಭ ಮೇಳೆ ಕೋಟ್ಯಂತರ ಜನರನ್ನು ಆಕರ್ಷಿಸುವ ಮೂಲಕ ಮೂರು ದಾಖಲೆಗಳಿಗೆ ಸಾಕ್ಷಿಯಾಗಿದೆ.
ಈ ಹಿಂದೆ ಇದೇ ಕುಂಭಮೇಳದ ಆಕರ್ಷಣೆಗಾಗಿ 'ಪೇಂಟ್‌ ಮೈ ಸಿಟಿ' ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನಕ್ಕೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿತ್ತು. ಕಳೆದ ಫ್ರೆಬವರಿ 28ರಂದು ನಡೆದಿದ್ದ ಈ ಅಭಿಯಾನದಲ್ಲಿ 7,664 ಜನ ಜನ 'ಪೇಂಟ್‌ ಮೈ ಸಿಟಿ' ಅಭಿಯಾನದಲ್ಲಿ ಪಾಲ್ಗೊಂಡು 60 ಅಡಿ ಉದ್ದದ ಕ್ಯಾನ್ವಾಸ್‌ನಲ್ಲಿ ಬಣ್ಣದಲ್ಲಿ ಅದ್ದಿದ ಹಸ್ತದ ಅಚ್ಚು ಮೂಡಿಸಿದ್ದರು. 
ಇನ್ನು ಇದೇ ಮಾರ್ಚ್ 1ರಂದು ಇದೇ ಸಂಗಮದ ಬಳಿ 500 ಬಸ್‌ಗಳನ್ನು 3.2 ಕಿ.ಮೀ ಉದ್ದದವರೆಗೆ ಸಾಲಾಗಿ ನಿಲ್ಲಿಸಲಾಗಿತ್ತು. ಇದು 'ಅತಿ ಉದ್ದದ ಬಸ್‌ ಪರೇಡ್‌' ಎಂಬ ದಾಖಲೆ ನಿರ್ಮಾಣ ಮಾಡಿದೆ.  
ಇನ್ನು ಸ್ವಚ್ಛತೆಯಲ್ಲೂ 2019ರ ಕುಂಭಮೇಳೆ ದಾಖಲೆ ನಿರ್ಮಾಣ ಮಾಡಿದ್ದು, ಇದೇ ಮಾರ್ಚ್ 3 ಅಂದರೆ ನಿನ್ನೆ 10,000ಕ್ಕೂ ಅಧಿಕ ಪೌರಕಾರ್ಮಿಕರು ನಗರದ ವಿವಿಧೆಡೆ ಒಮ್ಮೆಲೇ ಕಸ ಗುಡಿಸುವ ಮೂಲಕ 'ಏಕಕಾಲದಲ್ಲಿ ಹೆಚ್ಚು ಜನ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ' ದಾಖಲೆ ಇದಾಗಿದೆ. 
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಈ ವರ್ಷ ಮಹಾ ಕುಂಭಮೇಳದಲ್ಲಿ ಈ ವರೆಗೂ ಸುಮಾರು 22 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com