ಕರ್ತಾರ್‌ಪುರ್‌ ಕಾರಿಡಾರ್: ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ

ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ್‌ ಗೆ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್ ಕುರಿತಂತೆ ಭಾರತ-ಪಾಕಿಸ್ತಾನದ ಮಡುವೆ ಮೊದಲ ಸಭೆ ಮಾರ್ಚ್ 14ರಂದು ನಡೆಯಲಿದೆ.
ಕರ್ತಾರ್‌ಪುರ್‌ ಕಾರಿಡಾರ್:  ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ
ಕರ್ತಾರ್‌ಪುರ್‌ ಕಾರಿಡಾರ್: ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ
ನವದೆಹಲಿ: ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ್‌ ಗೆ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್  ಕುರಿತಂತೆ ಭಾರತ-ಪಾಕಿಸ್ತಾನದ ಮಡುವೆ ಮೊದಲ ಸಭೆ ಮಾರ್ಚ್ 14ರಂದು ನಡೆಯಲಿದೆ. ಪಂಜಾಬ್ ನ ಅಟಾರಿ-ವಾಘಾ ಗಡಿಯಲ್ಲಿ ಈ ಸಭೆ ಆಯೋಜನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಸಭೆ ಬಳಿಕ ಅದೇ ದಿನದಂದು ಕಾರಿಡಾರ್ ನ  ಕುರಿತು ತಾಂತ್ರಿಕ ಮಟ್ಟದ ಚರ್ಚೆ ನಡೆಯಬೇಕೆಂದು ಭಾರತ ಸೂಚಿಸಿದೆ" ಎಂದು ಹೇಳಿಕೆ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದಂತೆ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ್-ಪಾಕ್ ನಡುವಿನ ಸಂಬಂಧ ಸಂಘರ್ಷ ಕೊನೆಗೊಳಿಸಲು ಪಾಕಿಸ್ತಾನ ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ 6 ರಂದು ದೆಹಲಿಗೆ ಭಾರತದ ಹೈಕಮಿಷನರ್ ಸೊಹೈಲ್ ಮಹಮೂದ್ ಹಿಂತಿರುಗುವಂತೆಯೂ ಸೂಚಿಸಿದೆ. 
ಮಾರ್ಚ್ 14ರ ಸಭೆಯ ಬಳಿಕ ಮಾರ್ಚ್ 28ರಂದು ಭಾರತೀಯ ನಿಯೋಗವು ಇಸ್ಲಾಮಾಬಾದ್ ಗೆ ಭೇಟಿ ನೀಡಲಿದೆ.
ಫೆಬ್ರುವರಿ 14 ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇಹಮ್ಮದ್ (ಜೆಎಂ) ನಡೆಸಿದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಸಮಾಲೋಚನೆಗಳಿಗಾಗಿ ಮಹಮೂದ್ ಅವರನ್ನು ಪಾಕಿಸ್ತಾನ ಹಿಂದಕ್ಕೆ ಕರೆಸಿಕೊಂಡಿತ್ತು. ಇದೀಗ ಮಂಗಳವಾರ ರಾತ್ರಿ ಪಾಕಿಸ್ತಾನವು ಜಮಾತ್-ಉಲ್-ದವಾ(ಜೆಯುಡಿ)ಮತ್ತು ಅದರ ಸಹ-ಸಂಸ್ಥೆಫಲಾಹ್ ಇ ಇನ್ಸ್ಯಾನಿಟ್ ಫೌಂಡೇಶನ್ (ಎಫ್ಐಎಫ್) ಗಳನ್ನು ಹಾಗೂ ಲಷ್ಕರ್-ಇ-ತೊಯ್ಬಾ ಭಯೋತ್ಪಾದನಾ ಸಂಘಟನೆ ಸೇರಿ ಹಲವು ಸಂಘಟನೆಗಳನ್ನು ಭಯೋತ್ಪಾದನೆ ವಿದ್ರೋಧಿ ಕಾಯ್ದೆ 1997ರ ಅಡಿಯಲ್ಲಿ ನಿಷೇಧಿಸಿದೆ. ಆದರೆ ಜೆಇಎಂ ವುಇರುದ್ಧ ಇದುವರೆಗೆ ಯಾವ ನಿಷೇಧವನ್ನೂ ಹೇರಿಲ್ಲ. ಈ ಹಿನ್ನೆಲೆಯಲ್ಲಿ ಮೊನ್ನಿನ ಪುಲ್ವಾಮಾ ದಾಳಿ ಬಳಿಕ ಭಾರತ ಸೇರಿ ಜ್ಗತಿಕ ಶಕ್ತಿಶಾಲಿ ರಾಷ್ಟ್ರಗಳು  ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಭೇಕೆಂದು ಪಾಕಿಸ್ತಾನಕ್ಕೆ ತೀವ್ರ ಒತ್ತಡ ಹಾಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com