ಶೇ.4-5 ರಷ್ಟು ಮತಗಳ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ- ಮೋಹನ್ ದಾಸ್ ಪೈ

ಸಾಮಾಜಿಕ ಜಾಲತಾಣ ಶೇ.4-5 ರಷ್ಟು ಮತಗಳ ಮೇಲೆ ಪ್ರಭಾವ ಬೀರಲಿದೆ ಎಂದು ಐಟಿ ಕ್ಷೇತ್ರದ ಹಿರಿಯ ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ಮೋಹನ್ ದಾಸ್ ಪೈ
ಮೋಹನ್ ದಾಸ್ ಪೈ
ನವದೆಹಲಿ: ಸಾಮಾಜಿಕ ಜಾಲತಾಣ ಶೇ.4-5 ರಷ್ಟು ಮತಗಳ ಮೇಲೆ ಪ್ರಭಾವ ಬೀರಲಿದೆ ಎಂದು ಐಟಿ ಕ್ಷೇತ್ರದ ಹಿರಿಯ ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ. 
ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಲೋಕಸಭಾ ಚುನಾವಣೆಗೆ ಚಲಾವಣೆಯಾಗಲಿರುವ ಮತಗಳ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವದ ಬಗ್ಗೆ ಮಾತನಾಡಿರುವ ಮೋಹನ್ ದಾಸ್ ಪೈ, ಸಾಮಾಜಿಕ ಜಾಲತಾಣಗಳಲ್ಲಿ ಯುವಜನಾಂಗ ಹೆಚ್ಚು ಅವಲಂಬಿತವಾಗಿದೆ ಇದೇ ಮೊದಲ ಬಾರಿ ಮತದಾನ ಮಾಡಲಿರುವ ಯುವ ಸಮೂಹದ ಮೇಲೆ ಸಾಮಾಜಿಕ ಜಾಲತಾಣ ಹೆಚ್ಚು ಪ್ರಭಾವ ಬೀರಲಿದ್ದು ಶೇ.4-5 ರಷ್ಟು ಮತಗಳ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ ನಿರ್ಣಾಯಕವಾಗಿ ಇರಲಿದೆ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ. 
ಇದೇ ಮೊದಲ ಬಾರಿ ಮತದಾನ ಮಾಡುವ ಯುವ ಸಮೂಹ ಟಿ.ವಿ, ಪತ್ರಿಕಾ ಮಾಧ್ಯಮಗಳನ್ನು ನೋಡುವುದಿಲ್ಲ, ಓದುವುದಿಲ್ಲ. ಯುಟ್ಯೂಬ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣವೇ ಅವರಿಗೆ ಮಾಹಿತಿಯ ಮೂಲವಾಗಿರುತ್ತದೆ. ಆದ್ದರಿಂದ ಯುವ ಸಮೂಹದ ಮೇಲೆ ಸಾಮಾಜಿಕ ಜಾಲತಾಣ ಹೆಚ್ಚು ಪ್ರಭಾವ ಬೀರಲಿದೆ ಆದ್ದರಿಂದ ರಾಜಕೀಯ ಪಕ್ಷಗಳು ಈ ವಿಭಾಗದ ಯುವಕರ ಆಲೋಚನೆಗಳು ಏನು, ಅವರನ್ನು ಮತಚಲಾಯಿಸುವುದಕ್ಕೆ ಪ್ರೇರೇಪಣೆ ಮಾಡುವ ವಿಷಯಗಳಾವುದು, ಅವರ ಭಾವನೆಗಳೇನು ಅವರು ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರಿಯಬೇಕಿದೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com