ನ್ಯೂಜಿಲೆಂಡ್ ಶೂಟಿಂಗ್: ಭಾರತೀಯರ ನೆರವಿಗೆ ಸಹಾಯವಾಣಿ ಆರಂಭಿಸಿದ ಸರ್ಕಾರ

ನ್ಯೂಜಿಲೆಂಡ್ ವೆಲ್ಲಿಂಗ್ಟನ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಸಾವನ್ನಪ್ಪಿದವರ ಭಾರತೀಯ ಮೂಲದವರಿಗಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಸಹಾಯವಾಣಿ ತೆರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನ್ಯೂಜಿಲೆಂಡ್ ವೆಲ್ಲಿಂಗ್ಟನ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಸಾವನ್ನಪ್ಪಿದವರ ಭಾರತೀಯ ಮೂಲದವರಿಗಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಸಹಾಯವಾಣಿ ತೆರೆದಿದೆ.
ನಿನ್ನೆ ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಯಲ್ಲಿ ನಡೆದ ಶೂಟಿಂಗ್ ನಲ್ಲಿ 50 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಐದು ಮಂದಿ ಭಾರತೀಯರೂ ಕೂಡ ಸಾವನ್ನಪ್ಪಿದ್ದರು. ಅಂತೆಯೇ 9 ಮಂದಿ ಭಾರತೀಯರೂ ನಾಪತ್ತೆಯಾಗಿದ್ದು, ನಾಪತ್ತೆಯಾದ ಭಾರತೀಯರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದೀಗ ಸಾವನ್ನಪ್ಪಿದ ಭಾರತೀಯರ ಕುಟುಂಬಸ್ಥರಿಗಾಗಿ ಕೇಂದ್ರ ವಿದೇಶಾಂಗ ಇಲಾಖೆ ಸಹಾಯವಾಣಿ ತೆರೆದಿದೆ. ದೂರವಾಣಿ ಸಂಖ್ಯೆ 021803899 ಮತ್ತು 021850033 24*7 ಸಹಾಯವಾಣಿ ತೆರೆದಿದೆ. ಆಕ್ಲೆಂಡ್ ನ ದೂರವಾಣಿ ಸಂಖ್ಯೆ 021531212 ಯನ್ನು ತೆರೆದಿದೆ.
ನ್ಯೂಜಿಲೆಂಡ್ ನಲ್ಲಿ 2 ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ನಿವಾಸಿಗಳು ವಾಸಿಸುತ್ತಿದ್ದು, ಈ ಪೈಕಿ 30 ಸಾವಿರ ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com