ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದು, ನಮ್ಮ ಬಲ 14ಕ್ಕೆ ಏರಿದೆ: ಸಿಎಂ ಪ್ರಮೋದ್ ಸಾವಂತ್

ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.
ಸಿಎಂ ಪ್ರಮೋದ್ ಸಾವಂತ್
ಸಿಎಂ ಪ್ರಮೋದ್ ಸಾವಂತ್
ಪಣಜಿ: ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.
ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ಗೋವಾ ಪ್ರವಾಸೋಧ್ಯಮ ಸಚಿವ ಮತ್ತು ಎಂಜಿಪಿ ಶಾಸಕ ಮನೋಹರ್ ಅಜ್ಗಾಂವ್ಕರ್ ಅವರು, ಖಂಡಿತಾ ಮುಂದಿನ ಬಾರಿಯೂ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದ್ದು, ನಾವು ಎಲ್ಲಿಯೇ ಹೋದರು ಜನ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಂದಾಗಿಯೇ ಬಿಜೆಪಿ ಪಕ್ಷ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದೆ ಎಂದು ಹೇಳಿದರು. ಅಂತೆಯೇ ಬಿಜೆಪಿ ಸೇರ್ಪಡೆಯಾದ ತಮ್ಮ ನಿಲುವು ಸಮರ್ಥಿಸಿಕೊಂಡ ಅವರು ಓರ್ವ ದಲಿತನಾಗಿ ಎಂಜಿಪಿಯಲ್ಲಿ ನಾನು ಬೆಳೆಯುತ್ತೇನೆ ಎಂಬ ವಿಶ್ವಾಸ ನನಗಿಲ್ಲ. ಲಾವು ಮಮ್ಲೇದಾರ್ ಅವರಂತೆಯೇ ನನ್ನನ್ನೂ ಪಕ್ಷದಿಂದ ಕಿತ್ತು ಹಾಕಬಹುದು ಎಂದು ಹೇಳಿದರು.
ಬಿದೆಪಿ ಸೇರ್ಪಡೆಯಾದ ಮತ್ತೋರ್ವ ಶಾಸಕ ದೀಪತ್ ಪಾಸ್ಕರ್ ಅವರು ಮಾತನಾಡಿ, ನಾವು ನಿಜಕ್ಕೂ ಸಂತೋಷದಿಂದಲೇ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಇಂದು ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮವಿರಲಿದ್ದು, ಗೋವಾ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಿಎಂ ಪ್ರಮೋದ್ ಸಾವಂತ್ ಯಾವುದೇ ಇಲಾಖೆ ನೀಡಿದರು ಪ್ರಾಮಾಣಿಕವಾಗಿ ಅದನ್ನು ನಿಭಾಯಿಸುತ್ತೇವೆ ಎಂಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com