ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ: ಕಮಲ್ ಹಾಸನ್

ಭಾರತ ಸ್ವತಂತ್ರ ಪಡೆದ ನಂತರ ದೇಶದಲ್ಲಿ ಹುಟ್ಟಿಕೊಂಡಿದ್ದು ಹಿಂದೂ ಭಯೋತ್ಪಾದನೆ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಮಲ್ ಹಾಸನ್
ಕಮಲ್ ಹಾಸನ್
Updated on
ಚೆನ್ನೈ: ಭಾರತ ಸ್ವತಂತ್ರ ಪಡೆದ ನಂತರ ದೇಶದಲ್ಲಿ ಹುಟ್ಟಿಕೊಂಡಿದ್ದು ಹಿಂದೂ ಭಯೋತ್ಪಾದನೆ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಎಂಎನ್ಎಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, ಮುಸ್ಲಿಂರನ್ನು ತುಳಿಯಲಾಗುತ್ತಿದೆ ಹೀಗಾಗಿ ಹಿಂದೂಗಳು ಭಯೋತ್ಪಾದಕರು ಎಂದು ಹೇಳುತ್ತಿಲ್ಲ. ಬದಲಿಗೆ ಭಾರತಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶದ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳಿದ್ದಾರೆ. 
ನಾನು ಮಹಾತ್ಮ ಗಾಂಧಿಯ ಅತ್ಯುತ್ತಮ ಮೊಮ್ಮಗ. ಹೀಗಾಗಿ ನಾನು ಗಾಂಧಿಯ ಹತ್ಯೆಗೆ ನ್ಯಾಯ ಕೇಳುತ್ತಿದ್ದೇನೆ. ನನ್ನ ಹೃದಯವನ್ನು ಮುಟ್ಟಿ ಹೇಳುತ್ತೇನೆ ನಾನು ನಿಜವಾದ ಭಾರತೀಯ. ನಿಜವಾದ ಭಾರತೀಯನಿಗೆ ದೇಶದಲ್ಲಿ ಎಲ್ಲರೂ ಶಾಂತಿ ಮತ್ತು ಸಮಾನರಾಗಿರಬೇಕು ಎಂದು ಬಯಸುತ್ತಾನೆ. ಅಲ್ಲದೆ ರಾಷ್ಟ್ರೀಯ ಧ್ವಜದ ತ್ರಿವರ್ಣ ಬಣ್ಣವನ್ನು ಯಾವಾಗಲೂ ಒಂದೇ ರೀತಿ ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com